ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವು
ಇರಾನ್ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಹಾರ್ಮುಜ್ ಜಲಸಂಧಿ ಬಳಿ ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇದು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ತಂಗ್ಸಿರಿ ಹಾರ್ಮುಜ್ ಜಲಸಂಧಿಯ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇರಾನ್ ಪ್ರತೀಕಾರದ ಭೀತಿಯು ಗಲ್ಫ್ ರಾಷ್ಟ್ರಗಳು ಮತ್ತು ಜಾಗತಿಕ ಜಲಮಾರ್ಗಗಳಲ್ಲಿ ಭದ್ರತಾ ಬಿಕ್ಕಟ್ಟನ್ನು ಆಳಗೊಳಿಸುವ ಸಾಧ್ಯತೆ ಇದೆ. ಜಾಗತಿಕ ತೈಲ ಬಿಕ್ಕಟ್ಟಿನ ಆತಂಕವೂ ಎದುರಾಗಿದೆ.
ಜೆರುಸಲೇಂ, ಮಾರ್ಚ್ 26: ಹಾರ್ಮುಜ್ ಜಲಸಂಧಿ ಬಳಿ ಇಸ್ರೇಲ್(Israel) ನಡೆಸಿದ ದಾಳಿಯಲ್ಲಿ ಇರಾನಿನ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಈಗಾಗಲೇ ಹೆಚ್ಚಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ತಂಗ್ಸಿರಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಆಗಿದ್ದರು ಮತ್ತು ಹಾರ್ಮುಜ್‌ನಂತಹ ಕಾರ್ಯತಂತ್ರದ ಪ್ರದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ಮುಜ್ ಜಲಸಂಧಿ ಮುಚ್ಚಲು ಅವರೇ ಕಾರಣರಾಗಿದ್ದರು.
ಈ ಯುದ್ಧದಲ್ಲಿ ಇಲ್ಲಿಯವರೆಗೆ ಅಮೆರಿಕ-ಇಸ್ರೇಲ್ ಇರಾನ್‌ನ ಮೂರು ಡಜನ್ಗಿಂತಲೂ ಹೆಚ್ಚು ಪ್ರಮುಖ ಮಿಲಿಟರಿ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಇರಾನ್ ತನ್ನ ಉನ್ನತ ಮಿಟಿಲರಿ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಭಯವಿದೆ, ಇದು ಗಲ್ಫ್ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿನ ಭದ್ರತಾ ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸುವ ಸಾಧ್ಯತೆ ಇದೆ.
ಇರಾನ್‌ನ ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ನೌಕಾ ವಿಭಾಗದ ನೇತೃತ್ವ ವಹಿಸಿದ್ದ ತಂಗ್ಸಿರಿ, ಬಂದರು ನಗರಿ ಬಂದರ್ ಅಬ್ಬಾಸ್‌ನಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಗೆ ತಂಗ್ಸಿರಿ ಕಾರಣರಾಗಿದ್ದರು.