... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಪೋಷಕರಿಂದ ಬಂದ ಆಸ್ತಿಗೆ ಪತಿ, ಅತ್ತೆ-ಮಾವ ವಾರಸುದಾರರಲ್ಲ:

ಪೋಷಕರಿಂದ ಬಂದ ಆಸ್ತಿಗೆ ಪತಿ, ಅತ್ತೆ-ಮಾವ ವಾರಸುದಾರರಲ್ಲ: ಆಂಧ್ರ ಹೈಕೋರ್ಟ್ ಮಹತ್ವದ ತೀರ್ಪು!

ಅಮರಾವತಿ: ಹಿಂದೂ ಮಹಿಳೆಯೊಬ್ಬಳು ತನ್ನ ಪೋಷಕರಿಂದ ಉತ್ತರಾಧಿಕಾರವಾಗಿ ಪಡೆದ ಆಸ್ತಿಯ ಮೇಲೆ ಆಕೆಯ ಪತಿ ಅಥವಾ ಅತ್ತೆ-ಮಾವನ ಮನೆಯವರಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಆ ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟರೆ, ಆ ಆಸ್ತಿಯು ಮತ್ತೆ ಆಕೆಯ ಪೋಷಕರ ವಾರಸುದಾರರಿಗೇ ಮರಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ತರ್ಲಾ ರಾಜಶೇಖರ್ ರಾವ್ ಅವರಿದ್ದ ಪೀಠವು ಈ ಆದೇಶವನ್ನು ನೀಡಿದ್ದು, 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 15(2)(ಎ) ಅನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದೆ. 

ಈ ನಿಯಮದ ಪ್ರಕಾರ, ಮಹಿಳೆಯು ತನ್ನ ತಂದೆ ಅಥವಾ ತಾಯಿಯಿಂದ ಪಡೆದ ಆಸ್ತಿಯು ಆಕೆಗೆ ಮಕ್ಕಳಿಲ್ಲದ ಪಕ್ಷದಲ್ಲಿ ಆಕೆಯ ಪತಿಯ ಕುಟುಂಬಕ್ಕೆ ಸೇರುವುದಿಲ್ಲ, ಬದಲಿಗೆ ಆಕೆಯ ತಂದೆಯ ವಾರಸುದಾರರಿಗೆ ಸೇರುತ್ತದೆ ಎಂದು ನ್ಯಾಯಾಲಯ ವಿವರಿಸಿದೆ. ಪ್ರಕರಣದ ಹಿನ್ನೆಲೆ ಏನು?: ಈ ಕಾನೂನು ಹೋರಾಟವು 2002ರಲ್ಲಿ ನಡೆದ ಆಸ್ತಿ ವರ್ಗಾವಣೆಯ ವಿಷಯಕ್ಕೆ ಆರಂಭವಾಗಿತ್ತು. ಒಬ್ಬ ಮಹಿಳೆ ತನ್ನ ಆಸ್ತಿಯನ್ನು ತನ್ನ ಓರ್ವ ಮೊಮ್ಮಗಳಿಗೆ ಉಡುಗೊರೆಯಾಗಿ (Gift Deed) ನೀಡಿದ್ದರು. ಆದರೆ, ಆ ಮೊಮ್ಮಗಳು 2005ರಲ್ಲಿ ಮಕ್ಕಳಿಲ್ಲದೆಯೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಮೂಲ ಮಾಲಕಿಯಾದ ಅಜ್ಜಿ ಆ ಹಳೆಯ ಉಡುಗೊರೆಯನ್ನು ರದ್ದುಗೊಳಿಸಿ, ಆಸ್ತಿಯನ್ನು ತನ್ನ ಮತ್ತೊಬ್ಬ ಮೊಮ್ಮಗಳ ಹೆಸರಿಗೆ ವರ್ಗಾಯಿಸಿದ್ದರು. 

ಅಜ್ಜಿಯ ನಿಧನದ ನಂತರ, ಈ ಎರಡನೇ ಮೊಮ್ಮಗಳು ಆಸ್ತಿಯನ್ನು ತನ್ನ ಹೆಸರಿಗೆ ದಾಖಲಿಸಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಮೃತಪಟ್ಟ ಮೊದಲ ಮೊಮ್ಮಗಳ ಪತಿಯು ಈ ಆಸ್ತಿಯ ಮೇಲೆ ಹಕ್ಕು ಸಾಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದನು. ಕೆಳಹಂತದ ಕಂದಾಯ ಪ್ರಾಧಿಕಾರವು ಪತಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಎರಡನೇ ಮೊಮ್ಮಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಪರ ವಾದ ಆಲಿಸಿದ ಹೈಕೋರ್ಟ್, ಆಸ್ತಿಯು ಮಹಿಳೆಯ ತವರು ಮನೆಯಿಂದ ಬಂದಿದ್ದರಿಂದ ಮತ್ತು ಆಕೆಗೆ ಮಕ್ಕಳಿಲ್ಲದ ಕಾರಣ, ಆಕೆಯ ಪತಿಗೆ ಆ ಆಸ್ತಿಯಲ್ಲಿ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ತೀರ್ಪು ನೀಡಿದೆ. ಅಲ್ಲದೆ, ಕೆಳಹಂತದ ಪ್ರಾಧಿಕಾರದ ಆದೇಶವನ್ನು ರದ್ದುಗೊಳಿಸಿ, ಆಸ್ತಿಯನ್ನು ಎರಡನೇ ಮೊಮ್ಮಗಳ ಹೆಸರಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Source : Udayavani

1 hour ago

Home Flash News