BSY-Siddaramaiah: 'ಗ್ಯಾರಂಟಿ ಹೆಸರಲ್ಲಿ ರಾಜ್ಯ ದಿವಾಳಿ!' ಸಿದ್ದು ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗು
ದಾವಣಗೆರೆ: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಿಎಂ (Former CM) ಬಿಎಸ್ ಯಡಿಯೂರಪ್ಪ (BS Yediyurappa) ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ (Davanagere) ಸುದ್ದಿಗೋಷ್ಠಿ ನಡೆಸಿದ ಅವರು, ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ ಎಂದಿದ್ದಾರೆ. ಮುಡಾ (Muda) ಸೈಟ್ ಹಗರಣ, SCP TSP ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಎಲೆಕ್ಷನ್‌ಗೆ ಬಳಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವಂತದ್ದು ಅಂತ ಆರೋಪಿಸಿದ್ರು. ಭ್ರಷ್ಟಾಚಾರ ಮಾಡಿ ತುಘಲಕ್ ದರ್ಬಾರ್‌ವನ್ನು ಈ ಸರ್ಕಾರ ಮಾಡ್ತಿದೆ ಅಂತ ಬಿಎಸ್‌ವೈ ಕಿಡಿಕಾರಿದ್ರು.
ದಾವಣಗೆರೆ, ಬಾಗಲಕೋಟೆಯಲ್ಲಿ ಸರ್ಕಾರಕ್ಕೆ ತಕ್ಕಪಾಠ
ಈ ರಾಜ್ಯ ಕಂಡಂತಹ ಅತಿ ಭ್ರಷ್ಟ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ. ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಜನರು ತಕ್ಕಪಾಠ ಕಲಿಸವ ವಿಶ್ವಾಸವಿದೆ ಅಂತ ಬಿಎಸ್‌ವೈ ಹೇಳಿದ್ರು. ಕುರ್ಚಿ ಕಿತ್ತಾಟ, ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಹೆಸರಲ್ಲಿ ರಾಜ್ಯ ದಿವಾಳಿ ಮಾಡಿದೆ ಅಂತ ಯಡಿಯೂರಪ್ಪ ಆರೋಪಿಸಿದ್ರು.
ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ
ಸರಿಯಾದ ರಸ್ತೆಯಿಲ್ಲ. 2000 ರೂಪಾಯಿ ಗೃಹಲಕ್ಷ್ಮೀ ಹಣ ಹಾಕಿ, ಸಿಕ್ಕ ಸಿಕ್ಕ ವಸ್ತುಗಳ ದರ ಏರಿಕೆ ಮಾಡಲಾಗಿದೆ. 39 ಸಾವಿರ ಕೋಟಿ ಎಸ್‌ಸಿಪಿ ಟಿಎಸ್ ಹಣ ಗ್ಯಾರಂಟಿ ಯೋಜನೆಗೆ ಅಕ್ರಮವಾಗಿ ವರ್ಗಾವಣೆ ಅಂತ ಬಿಎಸ್‌ವೈ ಆರೋಪಿಸಿದ್ರು. ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದೆ ಅಂತ ಇದೇ ಸಂದರ್ಭದಲ್ಲಿ ಬಿಎಸ್‌ವೈ ಬಾಂಬ್ ಸಿಡಿಸಿದ್ರು.