ಪ್ರಧಾನಿ ಮೋದಿ ಒಬ್ಬ 'ದಾರಿ ತಪ್ಪಿದ ನಾಯಕ': ಕಾಂಗ್ರೆಸ್ ಟೀಕೆ
ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರಕಾರವು ವಿತರಿಸಿದ ಮಸೂದೆಗಳು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಎಲ್ಲಾ "ಭರವಸೆಗಳಿಗೆ" ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಬುಧವಾರ(ಏ15) ಹೇಳಿದೆ.
ಕ್ಷೇತ್ರ ಮರುವಿಂಗಡಣೆ ಪ್ರಶ್ನೆಗೆ ಸಂಬಂಧಿಸಿದಂತೆ "ಉದ್ದೇಶಪೂರ್ವಕ ವಂಚನೆ"ಯಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಹಿಳಾ ಮೀಸಲು ಕಾನೂನು ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಸರಕಾರ ಸಂಸದರಿಗೆ ವಿತರಿಸಿದ ಒಂದು ದಿನದ ನಂತರ, ವಿಪಕ್ಷವು ದಕ್ಷಿಣ ರಾಜ್ಯಗಳ.
ಲೋಕಸಭೆಯಲ್ಲಿ ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ ಮತ್ತು ವಾಯುವ್ಯ ಭಾರತದ ಸಣ್ಣ ರಾಜ್ಯಗಳು ಮತ್ತು ಪೂರ್ವದ ರಾಜ್ಯಗಳು ಸಹ ತಮ್ಮ ಬಲವನ್ನು ಕಳೆದುಕೊಳ್ಳುತ್ತವೆ ಎಂದು ಹೇಳಿದೆ.
"ಪ್ರಧಾನಿ ಒಬ್ಬ ತಥಾಕಥಿತ ನಾಯಕ, ಅವರ ಏಕೈಕ ವಿಶಿಷ್ಟ ಲಕ್ಷಣವೆಂದರೆ ದಾರಿತಪ್ಪಿಸುವ ಅವರ ಅಪ್ರತಿಮ ಸಾಮರ್ಥ್ಯ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.