Select Location
All Locations
State
Region
City / District
ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸದಿರಲು ಚೀನಾ ಒಪ್ಪಿಗೆ: ಡೊನಾಲ್ಡ್‌ ಟ್ರಂಪ್‌

ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸದಿರಲು ಚೀನಾ ಒಪ್ಪಿಗೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಹೊರ್ಮುಜ್‌ ಜಲಸಂಧಿಯನ್ನು ಶಾಶ್ವತವಾಗಿ ಮುಕ್ತಗೊಳಿಸುತ್ತಿರುವುದಕ್ಕೆ ಚೀನಾ ಸಂತಸಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖಿಸಿದ್ದಾರೆ. ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸದಿರಲು ಚೀನಾ ಒಪ್ಪಿಕೊಂಡಿರುವುದು  ನಮಗೆ ಸಂತಸ ತಂದಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಈ ಮೂಲಕ ಇರಾನ್‌ ಮೇಲಿನ ಯುದ್ಧ ಬಹುತೇಕ ಅಂತ್ಯದತ್ತ ತಲುಪಿದ್ದು ಎರಡು ದಿನದೊಳಗೆ ಮತ್ತೆ ಮಾತುಕತೆ ನಡೆಯಲಿದೆ ಎಂಬ ವಿಶ್ವಾಸವನ್ನು ಟ್ರಂಪ್‌ ವ್ಯಕ್ತಪಡಿಸಿದ್ದಾರೆ.
ಇರಾನ್‌ ಜೊತೆ ಭಾರಿ ಚೌಕಾಶಿ ನಡೆಸಲು ಟ್ರಂಪ್‌ ಬಯಸಿದ್ದಾರೆ. ಅಣ್ವಸ್ತ್ರ ಹೊಂದುವುದಿಲ್ಲ ಎಂಬುದಕ್ಕೆ ಅವರು ಬದ್ಧರಾದರೆ ಮಾತ್ರ ಅಭಿವೃದ್ಧಿ ಹೊಂದುವಂತೆ ಮಾಡುತ್ತೇವೆ ಎಂದಿದ್ದಾರೆ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಜಾರ್ಜಿಯಾದಲ್ಲಿ ಹೇಳಿದ್ದಾರೆ. ಅಮೆರಿಕ– ಇರಾನ್‌ ನಡುವೆ ಮಾತುಕತೆಯ ಪುನರಾರಂಭದ ಸಾಧ್ಯತೆ ಹೆಚ್ಚಿದೆ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ತಿಳಿಸಿದ್ದಾರೆ. ಮತ್ತೊಂದು ಕಡೆ ಲೆಬನಾನ್‌ ಮತ್ತು ಇಸ್ರೇಲ್‌ ದಶಕದ ಬಳಿಕ ಮೊದಲ ಬಾರಿಗೆ ನೇರ ರಾಜತಾಂತ್ರಿಕ ಮಾತುಕತೆಗಳನ್ನು ವಾಷಿಂಗ್ಟನ್‌ನಲ್ಲಿ ನಡೆಸಿವೆ. ಎರಡು–ಮೂರು ದಿನಗಳಲ್ಲಿ ಉಭಯ ದೇಶಗಳ ನಡುವೆ ಶಾಂತಿಯ ಒಪ್ಪಂದವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Prajavani 2 hours ago
Home Flash News