Select Location
All Locations
State
Region
City / District
Vinay kulkarni: ಊಟ, ನಿದ್ದೆ ಬಿಟ್ಟು ಜೈಲಿನಲ್ಲಿ ಶಾಸಕ ವಿನಯ್ ಕುಲಕರ್ಣಿ ಕಣ್ಣೀರು; ಇಂದೇ ಶಿಕ್ಷೆ ಪ್ರಮಾಣ ಪ್ರಕಟ

Vinay kulkarni: ಊಟ, ನಿದ್ದೆ ಬಿಟ್ಟು ಜೈಲಿನಲ್ಲಿ ಶಾಸಕ ವಿನಯ್ ಕುಲಕರ್ಣಿ ಕಣ್ಣೀರು; ಇಂದೇ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು (ಏ.16): ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ (Yogish Gowda Case) ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ 19 ಆರೋಪಿಗಳು ಅಪರಾಧಿಗಳು ಎಂದು ಕೋರ್ಟ್​ ತೀರ್ಪು (​Court Verdict) ನೀಡಿದ್ದು, ಇದು ಕೈ ಶಾಸಕನಿಗೆ ದೊಡ್ಡ ಆಘಾತ ನೀಡಿದೆ. ನಿರ್ದೋಷಿಯಾಗಿ ಹೊರಗೆ ಬರ್ತೀನಿ ಅಂದುಕೊಂಡಿದ್ದ ವಿನಯ್ ಕುಲಕರ್ಣಿ ಇದೀಗ ಜೈಲಿನಲ್ಲಿ ಕಣ್ಣೀರು ಹಾಕ್ತಿದ್ದಾರೆ. ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಜೈಲಿನಲ್ಲಿ ವಿನಯ್​ ಕುಲಕರ್ಣಿ ಕಣ್ಣೀರು ಯೋಗೀಶ್ ಗೌಡ ಕೊಲೆ ಕೇಸ್​​ನಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಿರ್ದೋಷಿ ಆಗ್ತೀನಿ ಅಂದುಕೊಂಡಿದ್ದ ಶಾಸಕ ವಿನಯ್ ಕುಲಕರ್ಣಿಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಅದೇ ಆಘಾತದಲ್ಲಿರೋ ವಿನಯ್ ಕುಲಕರ್ಣಿ ರಾತ್ರಿಯಿಡೀ ನಿದ್ದೆ ಮಾಡಿಲ್ಲ, ಸೆಲ್​​ನಲ್ಲೇ ಕಣ್ಣೀರು ಹಾಕ್ತಿದ್ದಾರೆ ಎಂದು ತಿಳಿದು ಬಂದಿದೆ. ಊಟ, ನಿದ್ದೆ ಇಲ್ಲದೆ ರಾತ್ರಿ ಕಳೆದ ಶಾಸಕ ರಾತ್ರಿ ಮತ್ತೆ ಸೆಲ್ ಒಳಗೆ ಹೋಗ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಕಣ್ಣೀರು ಹಾಕಿದ್ರು.

 ಇಂದು ಹತ್ತು ಗಂಟೆ ಒಳಗೆ ಎಲ್ಲಾ ಅಪರಾಧಿಗಳಿಗೂ ಜೈಲಾಧಿಕಾರಿಗಳು ಸಿಟಿಪಿ ನಂಬರ್ ನೀಡಲಿದ್ದಾರೆ. ನಿನ್ನೆ ಮಧ್ಯಾಹ್ನ ಕೋರ್ಟ್ ಬಳಿ ಊಟ ಮಾಡಿದ್ದ ಶಾಸಕ, ಮೆಡಿಕಲ್ ಟೆಸ್ಟ್​​ಗೆ ಕರೆದೊಯ್ಯುವಾಗಲು ಊಟ ಮಾಡಿಲ್ಲ. ಊಟ, ನಿದ್ದೆ ಬಿಟ್ಟ ವಿನಯ್​ ಕುಲಕರ್ಣಿ ಚಿಂತೆಯಲ್ಲೇ ರಾತ್ರಿ ಕಳೆದಿದ್ದಾರೆ. ಎಲ್ಲಾ ಆರೋಪಿಗಳನ್ನ ಸದ್ಯಕ್ಕೆ ಕ್ವಾರಂಟೈನ್ ಸೆಲ್​​ನಲ್ಲಿ ಇರಿಸಲಾಗಿದ್ದು, ಇಂದು 10 ಗಂಟೆಗೆ ಮತ್ತೆ ಕೋರ್ಟ್​​ಗೆ ಎಲ್ಲಾ ಆರೋಪಿಗಳನ್ನ ಸಿಬಿಐ ಭದ್ರತೆಯಲ್ಲಿ ಹಾಜರು ಪಡಿಸಲಿದ್ದಾರೆ. ಇವತ್ತಿನ ಶಿಕ್ಷೆ ಪ್ರಮಾಣದ ಬಗ್ಗೆ ನೋಡಿಕೊಂಡು ಮೇಲ್ಮನವಿ ಬಗ್ಗೆ ವಕೀಲರ ಜೊತೆ ಚರ್ಚೆ ನಡೆಯಲಿದೆ.


News18 Kannada 1 hour ago
Home Flash News