ತಿಲಕ್ ವರ್ಮಾ ಮೇಲೆ ಪಾಂಡ್ಯ ಗರಂ? ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ (101) ಅಜೇಯ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 100 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 99 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಮೈದಾನದಲ್ಲಿ ನಡೆದ ಒಂದು ಸನ್ನಿವೇಶದ ವಿಡಿಯೋ ಭಾರೀ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಬ್ಯಾಟರ್ ತಿಲಕ್ ವರ್ಮಾ ಅವರ ಮೇಲೆ ರೇಗಿದ್ದಾರೆ ಎಂದು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಈ ಪಂದ್ಯದ ನಡುವೆ ಸ್ಟ್ರಾಟಜಿಕ್ ಟೈಮ್‌ಔಟ್ ಸಮಯದಲ್ಲಿ ಈ ಘಟನೆ ನಡೆದಿದೆ. ತಿಲಕ್ ವರ್ಮಾ ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು (22 ಎಸೆತಗಳಲ್ಲಿ 19 ರನ್). ಈ ವೇಳೆ ಮೈದಾನಕ್ಕೆ ಬಂದ ನಾಯಕ ಹಾರ್ದಿಕ್ ಪಾಂಡ್ಯ, ತಿಲಕ್ ಅವರತ್ತ ಕೈ ಸನ್ನೆಯೊಂದಿಗೆ ಜೋರಾಗಿ ಏನನ್ನೋ ಹೇಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಇದನ್ನು ಕಂಡ ಅಭಿಮಾನಿಗಳು ಹಾರ್ದಿಕ್ ತನ್ನದೇ ಆಟಗಾರನ ಮೇಲೆ ಕೋಪಗೊಂಡಿದ್ದಾರೆ ಎಂದು ಭಾವಿಸಿದ್ದರು.ಈ ಪಂದ್ಯದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಅವರ ಮೇಲೆ ರೇಗುತ್ತಿರಲಿಲ್ಲ, ಅದು ಪ್ರೇರೇಪಿಸುವ ಮಾತುಗಳಷ್ಟೇ. ‘ನೀನು ಇದನ್ನು ಮಾಡಬಲ್ಲೆ, ನೀನು ಗೆಲ್ಲಿಸಿ ತೋರಿಸುತ್ತೀಯಾ!’ ಎಂದು ಅವರನ್ನು ಹುರಿದುಂಬಿಸಿದ್ದೆ” ಎಂದಿದ್ದಾರೆ.ಈ ಪಂದ್ಯದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಅವರ ಮೇಲೆ ರೇಗುತ್ತಿರಲಿಲ್ಲ, ಅದು ಪ್ರೇರೇಪಿಸುವ ಮಾತುಗಳಷ್ಟೇ. ‘ನೀನು ಇದನ್ನು ಮಾಡಬಲ್ಲೆ, ನೀನು ಗೆಲ್ಲಿಸಿ ತೋರಿಸುತ್ತೀಯಾ!’ ಎಂದು ಅವರನ್ನು ಹುರಿದುಂಬಿಸಿದ್ದೆ” ಎಂದಿದ್ದಾರೆ.