Select Location
All Locations
State
Region
City / District
BMTC-KSRTC Protest: ಮತ್ತೆ ಸಾರಿಗೆ ನೌಕರರ ಪ್ರತಿಭಟನೆ,​ ಬಂದ್ ಆಗುತ್ತಾ ಬಸ್ ಓಡಾಟ? ಸಚಿವರು ಕೊಟ್ರಾ ವಾರ್ನಿಂಗ್?

BMTC-KSRTC Protest: ಮತ್ತೆ ಸಾರಿಗೆ ನೌಕರರ ಪ್ರತಿಭಟನೆ,​ ಬಂದ್ ಆಗುತ್ತಾ ಬಸ್ ಓಡಾಟ? ಸಚಿವರು ಕೊಟ್ರಾ ವಾರ್ನಿಂಗ್?

ಬೆಂಗಳೂರು (ಮೇ.01): ರಾಜ್ಯ ಸಾರಿಗೆ ನೌಕರರು (Transport Employees) ಹಾಗೂ ಸರ್ಕಾರದ ನಡುವಿನ ಜಟಾಪಟಿ ಮುಗಿಯೋ ಲಕ್ಷಣವೇ ಕಾಣ್ತಿಲ್ಲ. ವೇತನ ಹೆಚ್ಚಳ (Salary Increase) ಸೇರಿದಂತೆ ಕೆಲ ಬೇಡಿಕೆಗಳ ಕುರಿತು ನೌಕರರ ಸಂಘಟನೆಗಳ ಜೊತೆಗೆ ನಡೆದ ಸರ್ಕಾರದ ಸಭೆ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ (Indefinite Strike) ನಡೆಸಲು ನಿರ್ಧರಿಸಿದೆ. ಮೇ 20ರಂದು ರಾಜ್ಯವ್ಯಾಪಿ ಮುಷ್ಕರ ಜರುಗಲಿದೆ. ಪ್ರತಿಭಟನೆ (Protest) ಕುರಿತು ಸಚಿವ ರಾಮಲಿಂಗಾರೆಡ್ಡಿ ಕೊಟ್ಟ ಎಚ್ಚರಿಕೆ ಏನು?

ಸಭೆ ವಿಫಲ ಹಿನ್ನೆಲೆ ಮತ್ತೆ ಪ್ರೊಟೆಸ್ಟ್​ ರಾಜ್ಯ ಸರ್ಕಾರ ಸಾರಿಗೆ ನೌಕರರ ಮೊದಲ ಕಂತಿನ ಹಿಂಬಾಕಿ ವೇತನ ಬಿಡುಗಡೆಗೆ ಮಾಡಿದೆ. ಬಳಿಕ ನೌಕರರ ಸಂಘ ಶೇ.7ರಷ್ಟು ವೇತನ ಹೆಚ್ಚಳ ಪ್ರಸ್ತಾವನೆ ಮುಂದಿಟ್ಟಿದೆ. ಅದನ್ನು ನೌಕರರ ಸಂಘಟನೆ ಮುಖ್ಯಸ್ಥರು ಒಪ್ಪದ ಹಿನ್ನೆಲೆ ಸಭೆಯಲ್ಲಿ ಸೂಕ್ತ ನಿರ್ಣಯಕ್ಕೆ ಬಾರದ ಹಿನ್ನೆಲೆ ಸಭೆ ವಿಫಲಗೊಂಡಿದೆ. ಮೇ 20ರಂದು ಸಾರಿಗೆ ನೌಕರರ ಮುಷ್ಕರ ಮೇ 20 ರಿಂದ‌ ಮುಷ್ಕರಕ್ಕೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನಿರ್ಧಾರ ಮಾಡಿದ್ದು, ಜಂಟಿ ಕ್ರಿಯಾ ಸಮಿತಿಯಡಿಯಲ್ಲಿರುವ ನಾಲ್ಕು‌ ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮುಷ್ಕರದ ಬಗ್ಗೆ ಮಲ್ಲೇಶ್ವರಂ AITUC ಕೇಂದ್ರ ಕಚೇರಿಯಲ್ಲಿ ಪ್ರೆಸ್ ಮೀಟ್ ನಡೆಸಿ ಮಾಹಿತಿ ನೀಡಲಿದ್ದಾರೆ.

ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ 2023ರ ಮಾರ್ಚ್‌ನಿಂದ ಜಾರಿಗೆ ಬರುವಂತೆ ವೇತನವನ್ನು ಶೇ.15ರಷ್ಟು ಏರಿಕೆ ಮಾಡಿ ಅನುಮೋದಿಸಿತು. ಆದರೆ ವೇತನ ಹೆಚ್ಚಳ ಹಿಂಬಾಕಿಯನ್ನು ಹತ್ತಾರು ತಿಂಗಳುಗಟ್ಟಲೇ ಬಾಕಿ ಉಳಿಸಿಕೊಂಡು ಬರಲಾಯಿತು. ಜೊತೆಗೆ ಇತರ ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದ ಪರಿಣಾಮ ನೌಕರರಿಗೆ ಮುಷ್ಕರ ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು? ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಎಷ್ಟು ವೇತನ ಹೆಚ್ಚಳ ಮಾಡಲು ಸಾಧ್ಯವಾಗುತ್ತೆ ಅಷ್ಟು ಮಾಡಲಾಗುತ್ತೆ ಎಂದು ತಿಳಿಸಿದ್ರೂ, ಮುಷ್ಕರ ಮಾಡಿದ್ರೆ ಅದಕ್ಕೆ ಅವರೇ ಹೊಣೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.


News18 Kannada 1 hour ago
Home Flash News