Select Location
All Locations
State
Region
City / District
ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಮನೋಬಲ ಎಲ್ಲದಕ್ಕೂ ಹೆಚ್ಚಿರಲಿದೆ

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಮನೋಬಲ ಎಲ್ಲದಕ್ಕೂ ಹೆಚ್ಚಿರಲಿದೆ

ಮೇಷ ರಾಶಿ : ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಫಲಾಪೇಕ್ಷೆ ಇಲ್ಲದೇ ಇಂದು ಕಾರ್ಯ ಮಾಡುವಿರಿ. ಸಾಲದಿಂದ ಮುಕ್ತವಾಗುವ ಲಕ್ಷಣಗಳು ಕಂಡುಬರುತ್ತವೆ ಮತ್ತು ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಂಜೆ ಸ್ನೇಹಿತರೊಂದಿಗೆ ಸಮಯ ಕಳೆಯಬಹುದು. ಕೆಲಸದಲ್ಲಿ ವೇಗ ಇರುತ್ತದೆ ಮತ್ತು ಯೋಜನೆಗಳು ಯಶಸ್ವಿಯಾಗುತ್ತವೆ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಹಿತಶತ್ರುಗಳಿಂದ ಸಣ್ಣ ಆಪತ್ತು ಬರಬಹುದು.

ವೃಷಭ ರಾಶಿ : ಒತ್ತಡದಿಂದ ಮುಕ್ತಿ ಪಡೆದು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ನೀವು ನಿಷ್ಣಾತರಂತೆ ತೋರಿಸಿಕೊಳ್ಳುವಿರಿ. ಖರ್ಚುಗಳ ಮೇಲೆ ನಿಯಂತ್ರಣ, ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಕೆಲಸ ವೇಗವನ್ನು ಪಡೆದ ಕಾರಣ ಆದಾಯವು ಹೆಚ್ಚಾಗುತ್ತದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾರು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು.

ಮಿಥುನ ರಾಶಿ : ಪ್ರಸಿದ್ಧಿಯ ಬಯಕೆ ನಿಮಗೆ ಬರಲಿದೆ. ಹೊಸ ಅವಕಾಶಗಳನ್ನು ಅನ್ವೇಷಣೆ ಮಾಡಲು ನಿಮಗೆ ಧೈರ್ಯ ಮತ್ತು ತಾಳ್ಮೆ ಬೇಕಾಗುತ್ತದೆ. ಹಳೆಯ ಯೋಜನೆಯನ್ನು ಪುನರಾರಂಭಿಸಲು ಅವಕಾಶ ಸಿಗುತ್ತದೆ. ಸರಿಯಾದ ಸಮಯ ಮತ್ತು ಸರಿಯಾದ ನಿರ್ಧಾರಕ್ಕಾಗಿ ಕಾಯಬೇಕು. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು.

ಕರ್ಕಾಟಕ ರಾಶಿ : ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಈ ದಿನ ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಎಲ್ಲಾ ಚಿಂತೆಗಳನ್ನು ಮರೆತು ನೀವು ಸಂತೋಷವಾಗಿರುತ್ತೀರಿ. ಯುವಕರು ತಮ್ಮ ವೃತ್ತಿಜೀವನದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಯಾವ ನೋವನ್ನೂ ನಿರ್ಲಕ್ಷಿಸುವುದು ಬೇಡ. ನಿಮ್ಮಿಂದ ಉಪಕಾರವನ್ನು ಕೇಳಿ ಬರಬಹುದು.

ಸಿಂಹ ರಾಶಿ : ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ಕೆಲಸದ ಹೊರೆ ಹೆಚ್ಚಿರಬಹುದು ಮತ್ತು ಸ್ವಲ್ಪ ಆಲಸ್ಯವಿರಬಹುದು. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮಗೆ ಪ್ರಯಾಣಿಸಲು ಅವಕಾಶ ಸಿಗುತ್ತದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಅವಶ್ಯಕ. ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ಗುರಿಯನ್ನು ಯಾರಾದರೂ ತಪದಪಿಸಬಹಿದಿ.

ಕನ್ಯಾ ರಾಶಿ : ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಹಣದ ಒಳಹರಿವು ಸುಗಮವಾಗಿರುತ್ತದೆ. ಒಳ್ಳೆಯ ಸುದ್ದಿ ಆಕಸ್ಮಿಕವಾಗಿ ಸಿಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷವಿರಲಿದೆ. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಟದಿಂದ ನಿಮಗೆ ಸುಖವಿರದು.

ತುಲಾ ರಾಶಿ : ಅನ್ಯರ ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಸಾಕಷ್ಟು ತಾಳ್ಮೆ ಮತ್ತು ತಿಳುವಳಿಕೆಯನ್ನು ಹೊಂದಿರುವುದು ಮುಖ್ಯ. ಜೊತೆಗೆ ನೀವು ದಿನವಿಡೀ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ತೊಡಕು ಬರಬಹುದು. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೇಕಾಗುವುದು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆ ಬರುವುದು.

ವೃಶ್ಚಿಕ ರಾಶಿ : ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ನೀವು ಕೆಲವು ಹಳೆಯ ವಿವಾದದಿಂದ ಪರಿಹಾರ ಪಡೆಯಬಹುದು. ಇದರಿಂದಾಗಿ ಕುಟುಂಬದ ವಾತಾವರಣವು ಹಗುರ ಮತ್ತು ಶಾಂತಿಯುತವಾಗಿರುತ್ತದೆ. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು.

ಧನು ರಾಶಿ : ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ನಿಮಗೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ಭಾಗಿಯಾಗುವ ಬದಲು, ನಿಮ್ಮ ಕೆಲಸವನ್ನು ಮಾಡುತ್ತಲೇ ಇರಿ, ಇಲ್ಲದಿದ್ದರೆ ಅದು ನಿಮ್ಮ ಘನತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಗುರಿಯನ್ನು ಬದಲಿಸದೇ ಮುನ್ನಡೆಯುವಿರಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.

ಮಕರ ರಾಶಿ : ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಯಶಸ್ಸಿನ ಜೊತೆಗೆ ಆರ್ಥಿಕ ಲಾಭವೂ ಇರುತ್ತದೆ. ಗೌರವ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಉತ್ಸಾಹ ಉಳಿಯುತ್ತದೆ ಮತ್ತು ದೊಡ್ಡ ಯಶಸ್ಸಿನ ಲಕ್ಷಣಗಳು ಕಂಡುಬರುತ್ತವೆ. ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ಬಾಕಿ ಇರುವ ಹಣವನ್ನು ಪಡೆಯಬಹುದು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು.

ಕುಂಭ ರಾಶಿ : ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕೆಲವು ಯೋಜನೆಗಳು ಸಹ ಮುಂದುವರಿಯುತ್ತವೆ. ಸ್ವಲ್ಪ ಸಮಯ ಒಳ್ಳೆಯ ಮತ್ತು ಜ್ಞಾನವುಳ್ಳ ಪುಸ್ತಕಗಳನ್ನು ಓದುವುದರಲ್ಲಿಯೂ ಕಳೆಯಿರಿ. ಅಜಾಗರೂಕತೆಯು ನಷ್ಟಕ್ಕೆ ಕಾರಣವಾಗಬಹುದು. ಯಾರೊಂದಿಗೂ ಪ್ರಮುಖ ವಾದಗಳಲ್ಲಿ ತೊಡಗಬೇಡಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಪರಿಶೀಲಿಸಿ.

ಮೀನ ರಾಶಿ : ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಗುರಿಯ ಮೇಲೆ ಮಾತ್ರ ಗಮನಹರಿಸುವ ಸಮಯ. ಅತಿಯಾದ ಖರ್ಚು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಸ್ವಲ್ಪ ಬುದ್ದಿವಂತರಾಗಿರಿ. ಕೋಪಗೊಳ್ಳುವುದರಿಂದ ನೀವು ಈಗಾಗಲೇ ಮಾಡಿರುವ ಯಾವುದೇ ಕೆಲಸವು ಹಾಳಾಗಬಹುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು.

ಇಂದಿನ ಪಂಚಾಂಗ: ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:31, ಯಮಗಂಡ ಕಾಲ 06:01 – 07:36, ಗುಳಿಕ ಕಾಲ 09:11 – 10:46


TV9 Kannada 54 minutes ago
Home Flash News