Select Location
All Locations
State
Region
City / District
‘ಆಪರೇಷನ್ ಸಿಂಧೂರ’ಕ್ಕೆ ವರ್ಷ: ಸಿಂಧೂ ಜಲ ಒಪ್ಪಂದದ ಕಥೆ ಏನು?

‘ಆಪರೇಷನ್ ಸಿಂಧೂರ’ಕ್ಕೆ ವರ್ಷ: ಸಿಂಧೂ ಜಲ ಒಪ್ಪಂದದ ಕಥೆ ಏನು?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ ದಾಳಿ ನಡೆಸಿ ಇಂದಿಗೆ (ಮೇ 7) ಒಂದು ವರ್ಷ ಕಳೆದಿದೆ. ದಾಳಿಯ ಬಳಿಕ ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ನದಿ ನೀರನ್ನು ನಿಲ್ಲಿಸಿ, ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟಿದೆ. ಈವರೆಗೂ ರಾಂಬನ್ ಜಿಲ್ಲೆಯ ಚೆನಾಬ್‌ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬಾಗ್ಲಿಹಾರ್ ಅಣೆಕಟ್ಟಿನ ದ್ವಾರಗಳು ಮುಚ್ಚಿವೆ. ಸಿಂಧೂ ಜಲ ಒಪ್ಪಂದದಲ್ಲಿ ಮುಖ್ಯವಾಗಿ ಸಿಂಧೂ, ಝೀಲಂ, ಚಿನಾಬ್, ರಾವಿ, ಬಿಯಾಸ್‌ ಮತ್ತು ಸತ್ಲೇಜ್ ನದಿಗಳನ್ನು ಒಳಗೊಂಡಿದೆ. ಈ ಜಲಾನಯನ ಪ್ರದೇಶವನ್ನು ಭಾರತ ಮತ್ತು ಪಾಕಿಸ್ತಾನ ಹಂಚಿಕೊಂಡಿವೆ. ಚೀನಾ ಮತ್ತು ಅಫ್ಗಾನಿಸ್ತಾನಕ್ಕೂ ಸಣ್ಣ ಪಾಲಿದೆ.

2025ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ, ಮಾತುಕತೆ ಮತ್ತು ಉಗ್ರವಾದ ಒಟ್ಟಿಗೆ ಸಾಗುವುದಿಲ್ಲ. ಭಾರತದ ರೈತರು ಸಂಕಷ್ಟದಲ್ಲಿರುವಾಗಲೂ ಸಿಂಧೂ ನದಿ ನೀರು ಶತ್ರು ರಾಷ್ಟ್ರಕ್ಕೆ ಹರಿದಿದೆ. ಇದು ಸ್ವೀಕಾರಾರ್ಹವಲ್ಲ’ ಎಂದಿದ್ದರು. ಹೀಗಾಗಿ ಈವರೆಗೂ ನೀರನ್ನು ಪಾಕಿಸ್ತಾನಕ್ಕೆ ಬಿಡಲಾಗುತ್ತಿಲ್ಲ. ಈ ಬಗ್ಗೆ ಮಾಜಿ ರಾಜತಾಂತ್ರಿಕ ಅಧಿಕಾರಿ ದಿಲೀಪ್ ಸಿನ್ಹಾ ಎಎನ್‌ಐ ಜೊತೆ ಮಾತನಾಡಿ, ‘ಸಿಂಧೂ ನದಿ ನೀರು ಒಪ್ಪಂದ ಅಮಾನತಿನಲ್ಲಿರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಪ್ರಗತಿಗೆ ಮಾತ್ರವಲ್ಲದೆ ಕೃಷಿ, ಇಂಧನ ಉತ್ಪಾದನೆ ಮತ್ತು ಉದ್ಯೋಗ ವಲಯದಲ್ಲಿಯೂ ಸುಧಾರಣೆಯಾಗಿದೆ’ ಎಂದಿದ್ದಾರೆ. ಒಪ್ಪಂದದ ಅಡಿಯಲ್ಲಿ ನದಿಗಳ ನೀರಿನ ಹರಿವು ಮತ್ತು ಮಳೆಯ ಬಗ್ಗೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ಮಾಹಿತಿಯನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಿದೆ. ಕಿದ್ದರು.

ಇನ್ನೊಂದೆಡೆ ಕಿರು, ಕ್ವಾರ್ , ಪಕಲ್ ದುಲ್ ಮತ್ತು ರಟ್ಲೆ ನಂತಹ ಬೃಹತ್ ಜಲವಿದ್ಯುತ್ ಯೋಜನೆಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ 2026ರ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಸಾಮರ್ಥ್ಯದಲ್ಲಿ ಶೇ 46ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಪಾಕ್ ಹೇಳುವುದೇನು? ಭಾರತದ ಈ ನಡೆಯಿಂದಾಗಿ ಜಲ ಯುದ್ಧವೂ ನಡೆಯುಬಹುದು ಎನ್ನುವ ಆತಂಕ ಪಾಕಿಸ್ತಾನಕ್ಕಿದೆ. ಅಲ್ಲದೆ ಇತ್ತೀಚಿಗೆ ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (Permanent Court of Arbitration) ವಾದಗಳನ್ನು ಪೂರ್ಣಗೊಳಿಸಿದೆ. ಭಾರತದ ಪಶ್ಚಿಮ ನದಿಗಳಲ್ಲಿ, ಅದರಲ್ಲೂ ಚೆನಾಬ್‌ನಲ್ಲಿನ ಜಲವಿದ್ಯುತ್‌ ಯೋಜನೆಗಳು ಸಿಂಧೂ ಜಲ ಒಪ್ಪಂದದ ಅಡಿಯಲ್ಲಿನ ನೀರು ಸಂಗ್ರಹ ಮತ್ತು ವಿನ್ಯಾಸದ ಮಿತಿಯನ್ನು ಮೀರಿದೆ ಎಂದು ಆರೋಪಿಸಿದೆ. ಇದನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದ್ದು, ಒಪ್ಪಂದವೇ ಅಮಾನತಿನಲ್ಲಿರುವಾಗ ನ್ಯಾಯಾಲಯದ ವ್ಯಾಪ್ತಿಗೆ ಅರ್ಥವಿಲ್ಲ. 

ಈ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದೆ. ಸಿಂಧೂ ಜಲ ಒಪ್ಪಂದ... ಸಿಂಧೂ ಜಲಾನಯನದ ವ್ಯಾಪ್ತಿಗೆ ಸೇರಿದ ನದಿಗಳು ಹಿಮಾಲಯದಲ್ಲಿ ಹುಟ್ಟಿ ಭಾರತ ಭೂಪ್ರದೇಶದಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೀಲಂ, ಚಿನಾಬ್, ರಾವಿ, ಬಿಯಾಸ್, ಸತ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆರು ದಶಕಗಳ ಹಿಂದೆ ಒಪ್ಪಂದ ಏರ್ಪಟ್ಟಿತ್ತು. ಸಿಂಧೂ ನದಿ ನೀರಿನ ಒಪ್ಪಂದ ಪ್ರಕಾರ ನದಿಯ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಅದರ ಮೇಲೆ ಭಾರತದ ಸಿಂಹಪಾಲಿದೆ. ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದ ಸಾಕಾರಗೊಂಡಿತು. ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್, 1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಒಪ್ಪಂದಕ್ಕೆ ಸಹಿ ಹಾ


Prajavani 50 minutes ago
Home Flash News