KRS: 92 ಅಡಿಗೆ ಕುಸಿದ ಕೆಆರ್‌ಎಸ್, ಮೈಸೂರಿಗೆ ಅಧಿಕಾರಿಗಳು ಕೊಟ್ಟರು ಎಚ್ಚರಿಕೆ ಸಹಿತ ಶುಭಸುದ್ದಿ! ಏನದು? ಇಲ್ಲಿದೆ ವಿಷಯ
ಮೈಸೂರು; ಬೇಸಿಗೆಯ ಬಿಸಿಲು (Summer) ನೆತ್ತಿ ಸುಡುತ್ತಿದೆ, ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದೆ ಎಂಬ ಆತಂಕದ ನಡುವೆ ಮೈಸೂರಿನ (Mysuru) ಜನರಿಗೆ ಈಗ ಒಂದು ದೊಡ್ಡ ನಿರಾಳದ ಸುದ್ದಿ ಬಂದಿದೆ! ಜೂನ್ ತಿಂಗಳ ಅಂತ್ಯದವರೆಗೆ ಮಳೆಯೇ ಬರದಿದ್ದರೂ ಕುಡಿಯುವ ನೀರಿನ (Drinking Water) ಪೂರೈಕೆಯಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಖಚಿತಪಡಿಸಿದ್ದಾರೆ. ಆದರೆ ಈ ಆತ್ಮವಿಶ್ವಾಸದ ಹಿಂದಿರುವ ಅಧಿಕಾರಿಗಳ (Officers) ಲೆಕ್ಕಾಚಾರ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
ಮೈಸೂರು ನಗರದ ಕುಡಿಯುವ ನೀರಿನ ಪ್ರಮುಖ ಆಧಾರಸ್ತಂಭವಾದ ಕೆ.ಆರ್.ಎಸ್ ಜಲಾಶಯದಲ್ಲಿ ಪ್ರಸ್ತುತ 92.07 ಅಡಿ ನೀರಿನ ಸಂಗ್ರಹವಿದ್ದು, 20.70 ಟಿಎಂಸಿ ನೀರು ಲಭ್ಯವಿದೆ. ಜಲಾಶಯದ ಮಟ್ಟ 70 ಅಡಿ ತಲುಪುವವರೆಗೂ ಮೈಸೂರಿಗೆ ನಿರಾತಂಕವಾಗಿ ನೀರು ಒದಗಿಸಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಕಬಿನಿ ಜಲಾಶಯದಲ್ಲಿ 2,258 ಅಡಿ ನೀರಿನ ಸಂಗ್ರಹ ಲಭ್ಯವಿದ್ದು, ಅಲ್ಲಿಂದಲೂ ಕುಡಿಯುವ ನೀರಿಗೆ ಯಾವುದೇ ಕೊರತೆಯಿಲ್ಲ ಎಂಬ ಭರವಸೆ ಇದೆ.
ಇನ್ನು ನಗರಕ್ಕೆ ದಿನನಿತ್ಯ ನೀರು ತಲುಪುವ ರೀತಿ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ! ಮೈಸೂರು ನಗರಕ್ಕೆ ಪ್ರತಿದಿನ ಒಟ್ಟು 300 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಅದರಲ್ಲಿ ಹೊಂಗಳ್ಳಿ ಘಟಕದಿಂದ 120 ಎಂಎಲ್‌ಡಿ, ಮೇಲಾಪುರ ಘಟಕದಿಂದ 100 ಎಂಎಲ್‌ಡಿ, ಕಬಿನಿ ಘಟಕದಿಂದ 100 ಎಂಎಲ್‌ಡಿ ಹಾಗೂ ಬೆಳಗೋಳ ಘಟಕದಿಂದ 45 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ನಗರದ 65 ವಾರ್ಡ್‌ಗಳ ಜೊತೆಗೆ ಹೊಸ ಬಡಾವಣೆಗಳಿಗೂ ನಿರಂತರ ನೀರು ಹರಿಸಲಾಗುತ್ತಿದೆ.