Select Location
All Locations
State
Region
City / District
Chikkamagaluru: ಶೃಂಗೇರಿ ಮರು ಮತ ಎಣಿಕೆ ಗದ್ದಲ! ಟಿಡಿ ರಾಜೇಗೌಡ ದೂರು, ಇತ್ತ ಹೈಕೋರ್ಟ್​​ನಿಂದ ಮಹತ್ವದ ಆದೇಶ

Chikkamagaluru: ಶೃಂಗೇರಿ ಮರು ಮತ ಎಣಿಕೆ ಗದ್ದಲ! ಟಿಡಿ ರಾಜೇಗೌಡ ದೂರು, ಇತ್ತ ಹೈಕೋರ್ಟ್​​ನಿಂದ ಮಹತ್ವದ ಆದೇಶ

ಬೆಂಗಳೂರು (ಮೇ.07): ಶೃಂಗೇರಿ ವಿಧಾನಸಭೆ ಚುನಾವಣೆಯ (Assembly Election) ಅಂಚೆ ಮತ ಮರು ಎಣಿಕೆ ರಾಜ್ಯದಲ್ಲಿ ಭಾರೀ ಗದ್ದಲ ಸೃಷ್ಟಿಸಿದೆ. ಬಿಜೆಪಿಯವರು (BJP) ಕ್ರಿಮಿನಲ್ ಪಿತೂರಿ ನಡೆಸಿ ಮತ ಕದ್ದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆರೋಪಿಸಿದ್ರು. ಈ ಸಂಬಂಧ ಮುಖ್ಯಚುನಾವಣಾ ಆಯುಕ್ತರಿಗೆ ಟಿಡಿ ರಾಜೇಗೌಡ ದೂರು ನೀಡಿದ್ದಾರೆ. ಮತ್ತೊಂದೆಡೆ ಎಫ್ಐಆರ್ ರದ್ದು ಕೋರಿ ಶಾಸಕ ಡಿ ಎನ್ ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದ್ದು, ಮಹತ್ವದ ತೀರ್ಪು ನೀಡಿದೆ.

ಚುನಾವಣಾ ಆಯುಕ್ತರಿಗೆ ದೂರು ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು, ತಮ್ಮ ಮತವನ್ನ ಟ್ಯಾಂಪರ್ ಮಾಡಿ ಅಸಿಂಧು ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯುಕ್ತರಿಗೆ ದೂರು ನೀಡುವ ಮೂಲಕ ಮರು ಪರಿಶೀಲನೆಗೆ ಒತ್ತಾಯಿಸಿದ್ದಾರೆ. ಆರೋಪಗಳ ಸುರಿಮಳೆಗೈದ ಟಿಡಿ ರಾಜೇಗೌಡ ಬಳಿಕ ಮಾತಾಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಟಿಡಿ ರಾಜೇಗೌಡ ಅವರು, 2023ರ ಚುನಾವಣೆ ಮತ ಎಣಿಕೆಯ ವೇಳೆ ಜೆಡಿಎಸ್‌‌, ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ಅಭ್ಯರ್ಥಿಗಳ ಕೌಂಟಿಂಗ್ ಏಜೆಂಟ್ ಇದ್ದು. ಆಗ ಪಾರದರ್ಶಕವಾಗಿ ಮತ ಎಣಿಕೆ ಆಗಿದೆ.

ಮತ ಎಣಿಕೆ ಬಳಿಕ ರಾಜೇಗೌಡ ಗೆದ್ದರು ಎಂದು ಘೋಷಣೆ ಮಾಡಿದ್ರು. ವ್ಯಾಲಿಡ್ ಯಾವುದು? ಇನ್‌ ವ್ಯಾಲಿಡ್ ಯಾವುದು? ಎಂದು ಎಲ್ಲರಿಗೂ ತೋರಿಸಿದ್ರು. ಬಳಿಕ ನನ್ನ ಮೇಲೆ‌ ಅನೇಕ ಆರೋಪ ಮಾಡಿ ಕೇಸ್​ ಹಾಕಿದ್ರು. ಹೀಗಾಗಿ ಮರು ಎಣಿಕೆಗೆ ಉಚ್ಚ ನ್ಯಾಯಾಲಯ ಆದೇಶ ಮಾಡಿತ್ತು. ನ್ಯಾಯಯುತ ತನಿಖೆ ಆಗಲಿ ಮರು ಎಣಿಕೆ ವೇಳೆ ಬಂಡಲ್ ಬಂಡಲ್ ಇನ್‌ ವ್ಯಾಲಿಡ್ ಆಗಿದೆ. ವೋಟ್ ಟ್ಯಾಂಪರಿಂಗ್ ಆಗಿದೆ ಎನ್ನುವುದು ನಮ್ಮ ಅನುಮಾನ. ನ್ಯಾಯಯುತ ತನಿಖೆ ಆಗಲಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್‌ಗೆ ಮನವಿ ಕಳುಹಿಸುತ್ತೇವೆ‌ ಎಂದು ರಾಜೇಗೌಡ ಹೇಳಿದ್ದಾರೆ.

ನಮಗೆ ಬಿದ್ದ ವ್ಯಾಲಿಡ್ ವೋಟ್ ಇನ್‌ವ್ಯಾಲಿಡ್ ಮಾಡ್ತಾರೆ ಎಂದು ಗೊತ್ತಿರಲಿಲ್ಲ. ಪೋರೆನ್ಸಿಕ್ ಟೆಸ್ಟ್ ಮಾಡಬೇಕು. FIR ಆಗಿದ್ದು, ಅದಕ್ಕೆ ತಡೆ ಹೋಗಿದ್ದಾರೆ. ಚುನಾವಣಾ ಆಯೋಗವನ್ನ ಬಳಸಿ ಕೊಂಡಿದ್ದಾರೆಂದು ನಮ್ಮ ಅಭಿಪ್ರಾಯವಲ್ಲ ತನಿಖೆ ಆದ್ರೆ‌ ಸತ್ಯಾ ಸತ್ಯತೆ ಹೊರಬರುತ್ತೆ ಎಂದು ರಾಜೇಗೌಡ ಹೇಳಿದ್ದಾರೆ. ಜೀವರಾಜ್​ ಅರ್ಜಿ ವಿಚಾರಣೆ ಇತ್ತ ಶೃಂಗೇರಿ ಅಂಚೆ ಮತ ತಿದ್ದಿದ ಆರೋಪ ಪ್ರಕರಣ ಸಂಬಂಧ ಎಫ್ಐಆರ್ ರದ್ದು ಕೋರಿ ಶಾಸಕ ಡಿ ಎನ್ ಜೀವರಾಜ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಈ ಸಂಬಂಧ ಹೈಕೋರ್ಟ್ ನ್ಯಾ. ವಿ. ಶ್ರೀಶಾನಂದ ಅವರ ಪೀಠದಲ್ಲಿ ನಡೆದ ವಿಚಾರಣೆ ನಡೆದಿದ್ದು, ಜೂನ್ 3ಕ್ಕೆ ಎಲ್ಲಾ ಅರ್ಜಿಗಳ ವಿಚಾರಣೆ ಮುಂದೂಡಿಕೆ ಮಾಡಲಾಗಿದ್ದು, ಮಧ್ಯಂತರ ತಡೆ ನೀಡಿ ನ್ಯಾ.ವಿ.ಶ್ರೀಶಾನಂದ ಅವರಿದ್ದ ಪೀಠ ಆದೇಶ ಹೊರಡಿಸಿದೆ.


News18 Kannada 59 minutes ago
Home Flash News