Select Location
All Locations
State
Region
City / District
Nirmala Sitharaman deepfake video scam: ವಿತ್ತ ಸಚಿವೆ ನಿರ್ಮಲಾ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ

Nirmala Sitharaman deepfake video scam: ವಿತ್ತ ಸಚಿವೆ ನಿರ್ಮಲಾ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ

ಬೆಳಗಾವಿ (ಮೇ.7): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಡೀಪ್‌ಫೇಕ್ ವಿಡಿಯೋಗಳ ಮೂಲಕ ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 7.9 ಲಕ್ಷ ರು.ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ನಗರದ ಪ್ರಕಾಶ ಗುಬ್ಬಿ (76) ವಂಚನೆಗೆ ಒಳಗಾದವರು. ಈ ಸಂಬಂಧ ಕೊಲ್ಲಾಪುರ ಮೂಲದ ಆದರ್ಶ ಆನಂದ ಹಾಗೂ ಮಹಾರಾಷ್ಟ್ರದ ಬುಲ್ದಾಣಾ ಮೂಲದ ದಾಮೋದರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವರ ಹೆಸರಿನಲ್ಲಿ ಡೀಪ್‌ಫೇಕ್ ವಿಡಿಯೋಗಳನ್ನು ಬಳಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಲಾಭ ಗಳಿಸಿ ಎಂಬ ಆಮಿಷ ನೀಡಲಾಗುತ್ತಿತ್ತು.

ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ್ದ ಪ್ರಕಾಶ ತಮ್ಮ ವಿವರಗಳನ್ನು ನಮೂದಿಸಿದ್ದರು. ಬಳಿಕ ಆರೋಪಿಗಳು ಕರೆ ಮಾಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ವಂಚಿಸಿದ್ದರು. ಫೋನ್‌ಪೇ ಮೂಲಕ ₹16,500, ಬಳಿಕ ಹೆಚ್ಚಿನ ಲಾಭದ ಭರವಸೆ ನೀಡಿ ಆರ್‌ಟಿಜಿಎಸ್ ಮೂಲಕ ಒಟ್ಟು ₹7.9 ಲಕ್ಷ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾರೆ. ಹಣವನ್ನು ಹಿಂದಿರುಗಿಸಲು ಕೇಳಿದಾಗ, ಇನ್ನಷ್ಟು ಹಣ ಹೂಡಿದರೆ ಮಾತ್ರ ಮೊತ್ತ ಮತ್ತು ಲಾಭ ದೊರೆಯುತ್ತದೆ ಎಂದು ಹೇಳಿ ಮೋಸ ಮಾಡಲು ಯತ್ನಿಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Asianet News 46 minutes ago
Home Flash News