Select Location
All Locations
State
Region
City / District
ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ

ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ

ಪ್ರಧಾನಿ ಮೋದಿ ಪೆಟ್ರೋಲ್ ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದಾರೆ. ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಸರಬರಾಜು ಕೊರತೆ ಎದುರಾಗಿದೆ. ಯುದ್ಧದಿಂದ ಮತ್ತೆ ಇಂಧನ ಸರಬರಾಜು ಕೊರತೆ ಎದುರಾಗಿದೆ. ಹಣದುಬ್ಬರ, ವಿದೇಶಿ ವಿನಿಮಯ, ಆರ್ಥಿಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೋದಿ ಮಹತ್ವದ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಬಳಕೆ, ಅನಗತ್ಯ ಪ್ರವಾಸ ಕಡಿತ, ಮನೆಯಿಂದ ಕೆಲಸಗಳಿಂದ ಇಂಧನ ಉಳಿತಾಯಕ್ಕೆ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲವೆಡೆ ಇಂಧನ ಕೊರತೆ ಎದುರಾಗಿದೆ.

ಬೆಂಗಳೂರಿನ ಲಗ್ಗರೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಡೀಸೆಲ್ ಕೊರತೆ ಎದುರಾಗಿದೆ. ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಿದೆ. ಇದರ ಪರಿಣಾಮ ಗ್ರಾಹಕರು ಪರದಾಡುವಂತಾಗಿದೆ. ಲಗ್ಗರೆ ಪೆಟ್ರೋಲ್ ಬಂಕ್‌ಗೆ ಇಂಧನ ಸರಬರಾಜು ಆಗದ ಕಾರಣ ಪೆಟ್ರೋಲ್ ಬಂಕ್ ಮುಚ್ಚಲಾಗಿದೆ. ನಿನ್ನೆ(ಮೇ.10) ಸಂಜೆಯಿಂದಲೇ ಲಗ್ಗೆರೆ ಬಳಿ ಇರುವ ಹೆಚ್‌ಪಿ ಪೆಟ್ರೋಲ್ ಬಂಕ್ ಕ್ಲೋಸ್ ಮಾಡಲಾಗಿದೆ. ಗ್ರಾಹಕರು ಪೆಟ್ರೋಲ್ ಬಳಿ ಬಂದು ಮತ್ತೆ ಬೇರೆಡೆ ತೆರಳು ಪರಿಸ್ಥಿತಿ ಎದುರಾಗಿದೆ.

ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿದ್ದ ಕಾರಣ ನಡೆದುಕೊಂಡು ಬಂದ ವ್ಯಕ್ತಿಗೆ ನಿರಾಸೆಯಾಗಿದೆ. ಬಳಿಕ ಅರ್ಧ ಕಿಲೋಮೀಟರ್ ದೂರ ನಡೆದ ಬಾಟಲಿಯಲ್ಲಿ ಪೆಟ್ರೋಲ್ ತಂದ ಘಟನೆ ನಡೆದಿದೆ. ಹಲವರು ಬಾಟಲಿ ಮೂಲಕ ಪೆಟ್ರೋಲ್ ಖರೀದಿಸುತ್ತಿದ್ದಾರೆ. ವಿದೇಶದಲ್ಲಿ ಮದುವೆ ಮಾಡುವ ಬದಲು ಭಾರತದಲ್ಲಿ ಮದುವೆ, ವಿದೇಶಿ ಪ್ರವಾಸ ರದ್ದು ಮಾಡಿ, ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಂತೆ ಮೋದಿ ಸೂಚಿಸಿದ್ದಾರೆ. ಸ್ಥಳೀಯ ಉತ್ಪನ್ನಗಳ ಖರೀದಿ, ಸಾರಿಗೆ ವಾಹನಗಳ ಬಳಕೆ ಸೇರಿದಂತೆ ಪ್ರಮುಖ ಸೂತ್ರಗಳನ್ನು ಮೋದಿ ನೀಡಿದ್ದಾರೆ. ಯುದ್ಧ ಕಾರಣದಿಂದ ಇಂಧನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸ್ವಾಲಂಬಿಯಾಗಲು ಮೋದಿ ಸೂಚಿಸಿದ್ದಾರೆ.


Asianet News 1 hour ago
Home Flash News