Select Location
All Locations
State
Region
City / District
ತಮಿಳುನಾಡಿನಲ್ಲಿ ‘ಸಿದ್ದರಾಮಯ್ಯ ಮಾದರಿ’ ಆಡಳಿತ; ಜನರ ಹೃದಯ ಗೆಲ್ಲಲು CM ವಿಜಯ್ ಮಾಸ್ಟರ್ ಪ್ಲಾನ್!

ತಮಿಳುನಾಡಿನಲ್ಲಿ ‘ಸಿದ್ದರಾಮಯ್ಯ ಮಾದರಿ’ ಆಡಳಿತ; ಜನರ ಹೃದಯ ಗೆಲ್ಲಲು CM ವಿಜಯ್ ಮಾಸ್ಟರ್ ಪ್ಲಾನ್!

ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ತ್ವರಿತವಾಗಿ ಪರಿಹರಿಸಲು ವಿಜಯ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಸಿಎಂಓ’ (CMO - ಮುಖ್ಯಮಂತ್ರಿ ಕಚೇರಿ) ಮಾದರಿಯನ್ನು ಅನುಸರಿಸಲು ನಿರ್ಧರಿಸಿದ್ದಾರೆ. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್, ಆಡಳಿತದಲ್ಲಿ ಹೊಸ ಬದಲಾವಣೆ ತರಲು ಮುಂದಾಗಿದ್ದಾರೆ. ವಿಶೇಷವೆಂದರೆ, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ತ್ವರಿತವಾಗಿ ಪರಿಹರಿಸಲು ವಿಜಯ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಸಿಎಂಓ’ (CMO - ಮುಖ್ಯಮಂತ್ರಿ ಕಚೇರಿ) ಮಾದರಿಯನ್ನು ಅನುಸರಿಸಲು ನಿರ್ಧರಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವ ವಿಧಾನವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಇದೇ ಮಾದರಿಯನ್ನು ತಮಿಳುನಾಡಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ವಿಜಯ್ ಸರ್ಕಾರ, ಕರ್ನಾಟಕದ ಮುಖ್ಯಮಂತ್ರಿ ಕಚೇರಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ.ವೈಷ್ಣವಿ ಕುಪ್ಪಸ್ವಾಮಿ ನೇತೃತ್ವದ ಸಿಎಂಓ ಕಚೇರಿಯು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿದೆ. ಆಡಳಿತ ಯಂತ್ರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಸಿದ್ದರಾಮಯ್ಯ ಅವರ ಈ ಸಿದ್ಧಸೂತ್ರವು ವಿಜಯ್ ಅವರಿಗೆ ಮೆಚ್ಚುಗೆಯಾಗಿದೆ. ಸೋಷಿಯಲ್ ಮೀಡಿಯಾ, ಎಕ್ಸ್ (ಟ್ವಿಟ್ಟರ್) ಮತ್ತು ನೇರ ಭೇಟಿಯ ಮೂಲಕ ಬರುವ ದೂರುಗಳನ್ನು ವರ್ಗೀಕರಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಪರಿಹಾರ ಒದಗಿಸುವ ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಈಗ ತಮಿಳುನಾಡಿನಲ್ಲೂ ಜಾರಿಯಾಗಲಿದೆ.


News First 39 minutes ago
Home Flash News