Select Location
All Locations
State
Region
City / District
ಪುದುಚೆರಿ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ರಂಗಸಾಮಿ ಪ್ರಮಾಣ

ಪುದುಚೆರಿ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ರಂಗಸಾಮಿ ಪ್ರಮಾಣ

ಚೆನ್ನೈ: ಐದನೇ ಬಾರಿಗೆ ಪುದುಚೆರಿಯ ಮುಖ್ಯಮಂತ್ರಿಯಾಗಿ ಹಿರಿಯ ರಾಜಕಾರಣಿ, ಎಐಎನ್‌ಆರ್‌ಸಿ ಮುಖ್ಯಸ್ಥ ಎನ್‌.ರಂಗಸಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಕೆ.ಕೈಲಾಶ್‌ನಾಥನ್ ಅವರು ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಲ್ಲಾಡಿ ಕೃಷ್ಣ ರಾವ್ ಮತ್ತು ಬಿಜೆಪಿಯ ಎ. ನಮಸ್ಸಿವಾಯಂ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ನಾಯಕ ಬಿ.ಎಲ್. ಸಂತೋಷ್ ಉಪಸ್ಥಿತರಿದ್ದರು. ಏಪ್ರಿಲ್‌ 9 ರಂದು 30 ವಿಧಾನ ಸಭಾ ಕ್ಷೇತ್ರ ಗಳಿಗೆ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು.


Prajavani 36 minutes ago
Home Flash News