Select Location
All Locations
State
Region
City / District
Scholarships: SSLC,PUC ಮುಗಿತಾ? ನಿಮಗೆ ಕಾದಿದೆ 5 ಕ್ಕಿಂತ ಹೆಚ್ಚು ವಿದ್ಯಾರ್ಥಿವೇತನ; ನಿಮ್ಮ ಖಾತೆಗೆ ಜಮಾ ಆಗುತ್ತೆ 7000-2.5 ಲಕ್ಷ!

Scholarships: SSLC,PUC ಮುಗಿತಾ? ನಿಮಗೆ ಕಾದಿದೆ 5 ಕ್ಕಿಂತ ಹೆಚ್ಚು ವಿದ್ಯಾರ್ಥಿವೇತನ; ನಿಮ್ಮ ಖಾತೆಗೆ ಜಮಾ ಆಗುತ್ತೆ 7000-2.5 ಲಕ್ಷ!

ಬೆಂಗಳೂರು: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ಪರೀಕ್ಷೆ ಪಾಸಾಗುತ್ತಾರೆ, ಆದರೆ ಸರ್ಕಾರ ಕೊಡುವ ಕೋಟ್ಯಂತರ ರೂಪಾಯಿ ವಿದ್ಯಾರ್ಥಿವೇತನ (Scholarship) ಹಣ ಕ್ಲೈಮ್ (Claim) ಆಗದೇ ಹಾಗೇ ಉಳಿದುಬಿಡುತ್ತದೆ. ಕಾರಣ ಮಾಹಿತಿ ಇಲ್ಲದಿರುವುದು ಮಾತ್ರ. 75% ರಿಂದ 85% ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2025-26ನೇ ಸಾಲಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು (Scheme) ಜಾರಿಯಲ್ಲಿಟ್ಟಿವೆ.

ಮೊದಲಿಗೆ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಕೇಂದ್ರ ಕ್ಷೇತ್ರ ವಿದ್ಯಾರ್ಥಿವೇತನ ಯೋಜನೆ (CSSS / PM-USP) ಬಗ್ಗೆ ತಿಳಿಯೋಣ. ಈ ಯೋಜನೆಯಡಿ ಪದವಿ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ವಾರ್ಷಿಕ ₹12,000 ದೊರೆಯುತ್ತದೆ, ಮತ್ತು B.Tech, ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್‌ಗಳ 4ನೇ ಮತ್ತು 5ನೇ ವರ್ಷಕ್ಕೆ ₹20,000 ಸಿಗುತ್ತದೆ. ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೂ ₹20,000 ವಾರ್ಷಿಕ ನೀಡಲಾಗುತ್ತದೆ. ಮೂರು ವರ್ಷದ ಪದವಿ ಕೋರ್ಸ್‌ಗೆ ಒಟ್ಟು ₹60,000ವರೆಗೆ, ಮತ್ತು ಐದು ವರ್ಷದ ವೃತ್ತಿಪರ ಕೋರ್ಸ್‌ಗೆ ₹80,000 ರಿಂದ ₹1,00,000ಕ್ಕೂ ಹೆಚ್ಚು ಸಿಗಬಹುದು. ಪ್ರತಿ ವರ್ಷ ಸುಮಾರು 82,000 ಹೊಸ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅದರಲ್ಲಿ 50% ಹೆಣ್ಣುಮಕ್ಕಳಿಗೆ ಮೀಸಲು. ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇದ್ದು 80% ಅಥವಾ 80 ಪ್ರತಿಶತಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರು.

ವಿಜ್ಞಾನ ವಿಭಾಗದ ಮೇಧಾವಿ ವಿದ್ಯಾರ್ಥಿಗಳಿಗೆ ಇನ್ನೂ ದೊಡ್ಡ ಅವಕಾಶವಿದೆ. INSPIRE SHE ವಿದ್ಯಾರ್ಥಿವೇತನ ಅಡಿಯಲ್ಲಿ ಪ್ರತಿ ತಿಂಗಳು ₹5,000 ಅಂದರೆ ವರ್ಷಕ್ಕೆ ₹60,000 ವಿದ್ಯಾರ್ಥಿವೇತನ ಮತ್ತು ಜೊತೆಗೆ ₹20,000 ಮೆಂಟರ್‌ಶಿಪ್/ಬೇಸಿಗೆ ಸಂಶೋಧನಾ ಅನುದಾನ ಸೇರಿ ವಾರ್ಷಿಕ ₹80,000 ದೊರೆಯುತ್ತದೆ. B.Sc., B.S., ಅಥವಾ ಇಂಟಿಗ್ರೇಟೆಡ್ M.Sc. ತರಹದ ಮೂಲ ವಿಜ್ಞಾನ ಕೋರ್ಸ್‌ಗಳಿಗೆ 5 ವರ್ಷದವರೆಗೆ ಮುಂದುವರಿಯುವ ಈ ವಿದ್ಯಾರ್ಥಿವೇತನದ ಒಟ್ಟು ಮೊತ್ತ ₹4,00,000 ಆಗಬಹುದು! ಆದರೆ ಗಮನಿಸಿ, ಇದು ಮೇಲ್ಮಟ್ಟದ 1% ಅಂದರೆ ಸಾಮಾನ್ಯವಾಗಿ 90%+ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ.


News18 Kannada 36 minutes ago
Home Flash News