Select Location
All Locations
State
Region
City / District
Global Energy: ಶತ್ರುಗಳಿಗೆ ನಡುಕ ಹುಟ್ಟಿಸುತ್ತೆ ಮೋದಿ ಸರ್ಕಾರದ ಈ ಹೊಸ ಸಾಗರ ಅಸ್ತ್ರ! ಸಮುದ್ರದಾಳದಲ್ಲಿ ತೈಲ ಭದ್ರತೆಗೆ ಸಜ್ಜಾಯ್ತು ಸಂಜೀವಿನಿ!

Global Energy: ಶತ್ರುಗಳಿಗೆ ನಡುಕ ಹುಟ್ಟಿಸುತ್ತೆ ಮೋದಿ ಸರ್ಕಾರದ ಈ ಹೊಸ ಸಾಗರ ಅಸ್ತ್ರ! ಸಮುದ್ರದಾಳದಲ್ಲಿ ತೈಲ ಭದ್ರತೆಗೆ ಸಜ್ಜಾಯ್ತು ಸಂಜೀವಿನಿ!

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಜಾಗತಿಕ ಇಂಧನ ಭದ್ರತೆಯ (Energy Security) ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ. ಯುದ್ಧದ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಿತ್ತು ಗಲ್ಫ್ ದೇಶಗಳಿಂದ ಬರಬೇಕಿದ್ದ ತೈಲ ಮತ್ತು ಅನಿಲ ಟ್ಯಾಂಕರ್‌ಗಳು ಅರ್ಧಕ್ಕೇ ನಿಂತಿತ್ತು. ಭಾರತವು ತನ್ನ ಕಚ್ಚಾ ತೈಲದ ಅಗತ್ಯಗಳಲ್ಲಿ ಶೇ. 90 ರಷ್ಟು ಆಮದು ಮಾಡಿಕೊಳ್ಳುವುದರಿಂದ ಮತ್ತು ತೈಲ ಬೆಲೆ ಬ್ಯಾರೆಲ್‌ಗೆ $105 ಕ್ಕೆ ಏರಿರುವುದರಿಂದ ಆರ್ಥಿಕತೆ ಮೇಲೆ ಭಾರಿ ಒತ್ತಡ ಬಿದ್ದಿತ್ತು. ಸದ್ಯಕ್ಕೆ ಭಾರತಕ್ಕೆ ಹಾರ್ಮುಜ್ ಜಲಸಂಧಿ ಬಾಗಿಲು ತೆರೆದಿದೆ. ಆದರೆ ಭವಿಷ್ಯದಲ್ಲಿ ಏನಾಗುತ್ತೆ ಅಂತ ಈಗಲೇ ಹೇಳೋಕೆ ಆಗಲ್ಲ. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಭಾರತ ಈಗ ಮಧ್ಯಪ್ರಾಚ್ಯ-ಭಾರತ ಆಳ ಸಮುದ್ರ ಪೈಪ್‌ಲೈನ್ (MEIDP) ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡಿದೆ.

ಭಾರತ-ಓಮನ್ ಜಲಾಂತರ್ಗಾಮಿ ಅನಿಲ ಪೈಪ್‌ಲೈನ್ (Submarine Gas Pipeline) ಸುಮಾರು 2,000 ಕಿಲೋಮೀಟರ್ ಉದ್ದದ ಬೃಹತ್ ಯೋಜನೆಯಾಗಿದೆ. ಇದು ವಿಶ್ವದ ಅತ್ಯಂತ ಸವಾಲಿನ ಕೆಲಸವಾಗಿದ್ದು, ಸಮುದ್ರತಳದಲ್ಲಿ 3,450 ಮೀಟರ್ ಆಳದಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಓಮನ್ ಕರಾವಳಿಯಿಂದ ನೇರವಾಗಿ ಗುಜರಾತ್‌ಗೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ ಸುಮಾರು 40,000 ಕೋಟಿ ರೂ. ವೆಚ್ಚವಾಗಲಿದ್ದು, ಪೂರ್ಣಗೊಳ್ಳಲು 5 ರಿಂದ 7 ವರ್ಷ ಬೇಕಾಗಬಹುದು.

ಹಾರ್ಮುಜ್ ಜಲಸಂಧಿಯ ಪ್ರಸ್ತುತ ಮುಚ್ಚುವಿಕೆಯು ಗಲ್ಫ್ ರಾಷ್ಟ್ರಗಳಿಗೆ ಭಾರತದ ಅನಿಲ ಮತ್ತು ತೈಲ ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದೆ, ಇದರಿಂದಾಗಿ ಟ್ಯಾಂಕರ್‌ಗಳನ್ನು ಅವಲಂಬಿಸುವುದಕ್ಕಿಂತ ಪೈಪ್‌ಲೈನ್‌ಗಳು ಸುರಕ್ಷಿತ ಆಯ್ಕೆಯಾಗಿದೆ.


News18 Kannada 41 minutes ago
Home Flash News