Select Location
All Locations
State
Region
City / District
ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್

ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್

ಐಪಿಎಲ್ ಟೂರ್ನಿಯಲ್ಲಿ ವ್ಯವಸ್ಥಿತವಾಗಿ ಟಿಕೆಟ್ ಕಳ್ಳಾಟ ನಡೆಯುತ್ತಿರುವುದು ಇದೀಗ ಬಯಲಾಗಿದೆ. ಡಿಸಿ ಹಾಗೂ ಆರ್‌ಸಿಬಿ ಪಂದ್ಯದ ಟಿಕೆಟ್‌ನ್ನು ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರೇ 80 ಸಾವಿರ ರೂಗೆ ಮಾರಾಟ ಮಾಡುತ್ತಿರುವುದು ಬಯಲಾಗಿದೆ. ಐಪಿಎಲ್ 2026 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟದಲ್ಲಿದೆ. ಪ್ಲೇ ಆಫ್ ಲೆಕ್ಕಾಚಾರ ತೀವ್ರಗೊಂಡಿದೆ. ಇದರ ನಡುವೆ ದೆಹಲಿಯ ಕ್ರೈಮ್ ಬ್ರಾಂಚ್ ಪೊಲೀಸರ ಕಾರ್ಯಾಚರಣೆಯಲ್ಲಿ ಟಿಕೆಟ್ ಕಳ್ಳಾಟ ಪತ್ತೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದ ಟಿಕೆಟ್‌ನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಬರೋಬ್ಬರಿ 80,000 ರೂಪಾಯಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ದೆಹಲಿ ಕ್ರಿಕೆಟ್ ಸಂಸ್ಥೆ ಸಿಇಒ, ಅಕೌಂಟ್ ವಿಭಾಗದ ಪಿಎಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ನೋಟಿಸ್ ನೀಡಿದ್ದಾರೆ. ಬ್ಲಾಕ್ ಟಿಕೆಟ್ ಕುರಿತು ದೆಹಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಕಾಂಪ್ಲಿಮೆಂಟರ್ ಪಾಸ್‌ಗಳನ್ನು (ಫ್ರೀ ಟಿಕೆಟ್) ದೆಹಲಿ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರು 80 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ನೋಟಿಸ್ ನೀಡಿದ್ದಾರೆ.

ದೆಹಲಿಯ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ಉಚಿತ ಟಿಕೆಟ್‌ಗಳನ್ನು ಡಿಡಿಸಿಎ ಮುಖ್ಯಸ್ಥರು 80,000 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸಾಮಾನ್ಯವಾಗಿ ಜೇಟ್ಲಿ ಕ್ರೀಡಾಂಗಣದಲ್ಲಿ ಟಿಕೆಟ್ ಬೆಲೆ 8,000 ರೂಪಾಯಿಯಂದ ಗರಿಷ್ಠ 20,000 ರೂಪಾಯಿ ಮಾತ್ರ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನೇ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಜೇಟ್ಲಿ ಕ್ರೀಡಾಂಗಣದ ಹೊರಗಡೆ ಈ ರೀತಿ ಬ್ಲಾಕ್ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಮೂವರ ಅರೆಸ್ಟ್ ಮಾಡಲಾಗಿದೆ. ಜೇಟ್ಲಿ ಕ್ರೀಡಾಂಗಣದ ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್ ಬ್ಲಾಕ್ ಟಿಕೆಟ್ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿತ್ತು. ಡೆಲ್ಲಿ ಕ್ರಿಕೆಟ್ ಸಂಸ್ಥೆ 4000 ಟಿಕೆಟ್‌ಗಳನ್ನು ಕ್ರಿಕೆಟ್ ಸಂಸ್ಥೆಯ ಸದಸ್ಯರಿಗೆ ನೀಡುತ್ತದೆ. ಇದು ಉಚಿತ ಕಾಂಪ್ಲಿಮೆಂಟರ್ ಪಾಸ್ ಟಿಕೆಟ್. ಆದರೆ ಕೆಲ ಸದಸ್ಯರು ವಿದೇಶದಲ್ಲಿ ನಲೆಸಿದ್ದಾರೆ, ಮತ್ತೆ ಕೆಲವರು ನಿಧನರಾಗಿದ್ದಾರೆ. ಇಂತ ಸದಸ್ಯರ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ನೀಡಲಾಗುತ್ತದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆ ಸಿಇಒ ಸೇರಿದಂತೆ ಪ್ರಮುಖರೇ ಇದರಲ್ಲಿ ಶಾಮೀರಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.


Asianet News 40 minutes ago
Home Flash News