Select Location
All Locations
State
Region
City / District
ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿನಿಗೆ 'ಸಹಕರಿಸಲು' ಹೇಳಿದ ಲಕ್ನೋ ಪ್ರಾಧ್ಯಾಪಕ ಬಂಧನ

ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿನಿಗೆ 'ಸಹಕರಿಸಲು' ಹೇಳಿದ ಲಕ್ನೋ ಪ್ರಾಧ್ಯಾಪಕ ಬಂಧನ

ಲಕ್ನೋ: ವಿದ್ಯಾರ್ಥಿನಿಯೊಬ್ಬಳ ಜತೆ ಅಶ್ಲೀ*ಲ ಫೋನ್ ಸಂಭಾಷಣೆ ನಡೆಸಿ, ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಿ ಆಮಿಷ ಒಡ್ಡಲು ಯತ್ನಿಸಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬನನ್ನು ಬಂಧಿಸಲಾಗಿದೆ. ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಮಜೀತ್ ಸಿಂಗ್ ಅವರ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕ್ಲಿಪ್‌ನಲ್ಲಿ, ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಿಂದ ಲೈಂ** ಸಹಕಾರ ಕೋರುತ್ತಾ, "ಡಾರ್ಲಿಂಗ್, ನಾನು ನಿನಗಾಗಿ ಪರೀಕ್ಷಾ ಪತ್ರಿಕೆಯನ್ನು ಜೋಡಿಸಿದ್ದೇನೆ.

ಪರೀಕ್ಷೆಗೆ ಮೊದಲು ಅದನ್ನು ನಿನಗೆ ಕೊಡುತ್ತೇನೆ" ಎಂದು ಹೇಳುತ್ತಿರುವುದು ಕೇಳಿಬಂದಿದೆ. ವಿದ್ಯಾರ್ಥಿನಿ ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸಿದ್ದಾಗಿ ಹೇಳಿದ್ದು, ಈ ವಿಷಯದ ಬಗ್ಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ ನಂತರ ಪರೀಕ್ಷಾ ನಿಯಂತ್ರಣಾಧಿಕಾರಿ ವಿದ್ಯಾನಂದ್ ತ್ರಿಪಾಠಿ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದ್ದಾರೆ. ಹಸಂಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಪ್ರಾಧ್ಯಾಪಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಆದಾಗ್ಯೂ, ಆರೋಪಿ ಸಿಂಗ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ವಿಶ್ವವಿದ್ಯಾಲಯದೊಳಗಿನ "ಆಂತರಿಕ ರಾಜಕೀಯ" ದಿಂದಾಗಿ ತನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಹೊರಿಸಲಾಗುತ್ತಿದೆ ಮತ್ತು ಗುರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.


Udayavani 45 minutes ago
Home Flash News