Select Location
All Locations
State
Region
City / District
Bhojshala Verdict: ‘ಮುಸ್ಲಿಮರದ್ದೇ ತಪ್ಪು!’, ಭೋಜಶಾಲ ತೀರ್ಪಿನ ಬಗ್ಗೆ ಅಸಾದುದ್ದೀನ್ ಓವೈಸಿ ಸ್ಫೋಟಕ ಪ್ರತಿಕ್ರಿಯೆ

Bhojshala Verdict: ‘ಮುಸ್ಲಿಮರದ್ದೇ ತಪ್ಪು!’, ಭೋಜಶಾಲ ತೀರ್ಪಿನ ಬಗ್ಗೆ ಅಸಾದುದ್ದೀನ್ ಓವೈಸಿ ಸ್ಫೋಟಕ ಪ್ರತಿಕ್ರಿಯೆ

ಭೋಜಶಾಲ-ಕಮಲ ಮೌಲಾ ಮಸೀದಿ (Bhojshala Verdict) ವಿವಾದ ಕುರಿತಂತೆ ಮಧ್ಯ ಪ್ರದೇಶ ಹೈಕೋರ್ಟ್ ಇಂದೋರ್ ಪೀಠ (Madhya Pradesh High Court) ನೀಡಿದ ತೀರ್ಪಿನ ಬಗ್ಗೆ ಎಂಪಿ-ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲೇ ಮುಸ್ಲಿಮರಿಗೆ ನ್ಯಾಯ ಸಿಗಲಿದೆ ಎಂದು ಅಸಾದುದ್ದೀನ್ ಓವೈಸಿ (Asaduddin Owaisi ) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ, ಆರ್ಕಿಯಲಾಜಿಕಲ್ ಸಮೀಕ್ಷೆ ಆಫ್ ಇಂಡಿಯಾ ಒಟ್ಟಿಗೆ ಸೇರಿದೆ ಎಂದು ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ವಿವಾದಿತ ಆವರಣವೂ ಸರಸ್ವತಿ ದೇವಾಲಯವಾಗಿ ಮಧ್ಯ ಪ್ರದೇಶ ಹೈಕೋರ್ಟ್ ನೀಡಿದ ಆದೇಶ ಬಾಬ್ರಿ ಮಸೀದಿ ಕೇಸ್​ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಹೋಲಿಕೆಯಾಗುತ್ತಿದೆ. 

ಆದರೆ ಈ ತೀರ್ಪು ತಮಗೆ ವಿರುದ್ಧವಾಗಿ ಬರಲು ಮುಸ್ಲಿಮರೇ ಕಾರಣ ಎಂದು ಸಂಸದ ಹೇಳಿದ್ದಾರೆ. ಮಸೀದಿಯಲ್ಲಿ ವಸಂತ ಪಂಚಮಿ ದಿನ, ಪ್ರತಿ ಮಂಗಳವಾರ ಪೂಜೆ ನಿರ್ವಹಿಸಲು 1995ರಲ್ಲಿ ಮುಸ್ಲಿಮರು ಒಪ್ಪಂದ ಮಾಡಿಕೊಂಡಿದ್ದೆ ದೊಡ್ಡ ತಪ್ಪು ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಲ್ಲದೇ ಕೋರ್ಟ್ ಹಲವು ಪ್ರಾಥಮಿಕ ವಾಸ್ತವಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ. ಬಾಬ್ರಿ ಮಸೀದಿ ರೀತಿಯೇ ಈ ತೀರ್ಪು ಕೂಡ ನಂಬಿಕೆಯ ಆಧಾರದ ಮೇಲೆ ನೀಡಿದ್ದಾರೆ. ಭೋಜಶಾಲ ವಿವಾದ ಕೇಸ್ ನಲ್ಲಿ ಮುಸ್ಲಿಮರು 700 ವರ್ಷಗಳಿಂದ ಪ್ರಾರ್ಥನೆ ಮಾಡುತ್ತಿದ್ದಾರೆ. ‘ಈ ವಿಚಾರ ನಾನು ಏನು ಹೇಳ್ತಿದ್ದೀನಿ ಅಂದರೆ ಇದು ಭಕ್ತಿಯ ಸಂಕೇತ. ಈ ಹಿಂದಿನ ಸಂಸ್ಥಾನ ಇದನ್ನು ಮುಸ್ಲಿಮರಿಗೆ ನೀಡಿತ್ತು. ಆ ಸಮಯದಿಂದಲೂ ಇಲ್ಲಿ ಪ್ರಾರ್ಥನೆಗಳು ನಡೆಯುತ್ತಿವೆ’ ಎಂದು ಸಂಸದ ಹೇಳಿದ್ದಾರೆ.


News18 Kannada 5 hours ago
Home Flash News