ಅಧಿಕಾರಿಗೆ ‘ಸಿದ್ದು ಮೇಷ್ಟ್ರು’ ಎಕರೆ, ಗುಂಟೆ ಪಾಠ; ಪತ್ರಕರ್ತರ ಮೇಲೆ ರಾಯರಡ್ಡಿ ಆಣೆ ಇಟ್ಟಿದ್ದೇಕೆ?
ವಿಧಾನ ಮಂಡಲ ಅಧಿವೇಶನದಲ್ಲೇ ಆಗಾಗ ವ್ಯಾಕರಣ ‘ಮೇಷ್ಟ್ರು’ ಆಗಿ ಶಾಸಕರಿಗೆ ಸಂಧಿ, ಸಮಾಸ ಕುರಿತು ‘ಕ್ಲಾಸ್’ ತೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಯೊಬ್ಬರಿಗೆ ಗುಂಟೆ, ಎಕರೆ, ಹೆಕ್ಟೇರ್ ಬಗ್ಗೆ ಪಾಠ ಮಾಡಿ ಗಮನ ಸೆಳೆದರು. ಓಕಳಿಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರು ‘ರೇಷ್ಮೆ ಇಲಾಖೆಯು ಓಕಳೀಪುರಂನಲ್ಲಿ 1995ರಲ್ಲಿ 4.25 ಎಕರೆ ಜಮೀನನ್ನು ಖರೀದಿಸಿತ್ತು. ಈ ಎರಡೂವರೆ ಎಕರೆಗೂ ಅಧಿಕ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಾಣವಾಗಲಿದೆ’ ಎಂದು ಹೇಳುತ್ತಿದ್ದಾಗ, ಹಿಂದೆ ಇದ್ದ ಅಧಿಕಾರಿಯೊಬ್ಬರು, ‘ಎರಡೂ ಮುಕ್ಕಾಲು ಎಕರೆ ಜಾಗ ಸರ್’ ಎಂದು ಹೇಳಿದರು. ಇದರಿಂದ ಕೊಂಚ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕರೆ, ಗುಂಟೆ ಪಾಠ ಶುರು ಮಾಡಿದರು.
‘ಏಯ್ ಯಾರ್ರೀ ಅವರು? 4.25 ಎಕರೆ ಹೇಗೆ ಎರಡೂ ಮುಕ್ಕಾಲು ಎಕರೆ ಆಗುತ್ತದೆ. ಒಂದು ಎಕರೆಗೆ ಎಷ್ಟು ಗುಂಟೆ ಗೊತ್ತೇನ್ರೀ ನಿಮಗೆ? ಒಂದು ಎಕರೆಗೆ 40 ಗುಂಟೆ ಇರುತ್ತದೆ. 4 ಎಕರೆ 30 ಗುಂಟೆ ಆದರೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. 4.25 ಎಕರೆ ಹೇಗೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. ಯಾರ್ರೀ ನೀವು, ಯಾವ ಇಲಾಖೆಯ ಸಿಬ್ಬಂದಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಆ ಅಧಿಕಾರಿ ಅಲ್ಲಿಂದ ಮೆತ್ತಗೆ ಕಾಲ್ಕಿತ್ತರು. ಇಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಅವರು, ಇದನ್ನು ಹಿಂದೆ 10 ಕೋಟಿ 30 ಲಕ್ಷ ರುಪಾಯಿಗೆ ಖರೀದಿ ಮಾಡಲಾಗಿತ್ತು. ಈಗ 50 ಕೋಟಿ ರು. ಬೆಲೆಬಾಳುತ್ತದೆ ಅಲ್ವಾ ? ಮಾರುಕಟ್ಟೆಯಲ್ಲಿ ಈಗ ಎಷ್ಟು ಬೆಲೆ ಇದೆ ? ಒಂದು ಎಕರೆಗೆ ಎಷ್ಟಿದೆ? ಚದರ ಅಡಿಗೆ ಎಷ್ಟಿದೆ? ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ, ಅದಕ್ಕೆ ಉತ್ತರವನ್ನೂ ಹೇಳುತ್ತಾ ಹೋಗಿದ್ದು ವಿಶೇಷವಾಗಿತ್ತು.
ಪತ್ರಕರ್ತರ ಆಣೆಗೂ ನಾನು ಸಚಿವ ಸ್ಥಾನ ಕೇಳೇ ಇಲ್ಲ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದರು. ಸಚಿವ ಸಂಪುಟ ಪುನರ್ ರಚನೆ ಮೇ ಅಂತ್ಯಕ್ಕೆ ಆಗುತ್ತದೆ. ಹೊಸಬರಿಗೆ, ಹಿರಿಯರಿಗೆ ಅವಕಾಶ ನೀಡುತ್ತಾರೆ ಎನ್ನುವುದು ನನ್ನ ನಂಬಿಕೆ. ಆದರೆ, ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು. ‘ಏಯ್ ಯಾರ್ರೀ ಅವರು? 4.25 ಎಕರೆ ಹೇಗೆ ಎರಡೂ ಮುಕ್ಕಾಲು ಎಕರೆ ಆಗುತ್ತದೆ. ಒಂದು ಎಕರೆಗೆ ಎಷ್ಟು ಗುಂಟೆ ಗೊತ್ತೇನ್ರೀ ನಿಮಗೆ? ಒಂದು ಎಕರೆಗೆ 40 ಗುಂಟೆ ಇರುತ್ತದೆ. 4 ಎಕರೆ 30 ಗುಂಟೆ ಆದರೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. 4.25 ಎಕರೆ ಹೇಗೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. ಯಾರ್ರೀ ನೀವು, ಯಾವ ಇಲಾಖೆಯ ಸಿಬ್ಬಂದಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಆ ಅಧಿಕಾರಿ ಅಲ್ಲಿಂದ ಮೆತ್ತಗೆ ಕಾಲ್ಕಿತ್ತರು.
ಇಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಅವರು, ಇದನ್ನು ಹಿಂದೆ 10 ಕೋಟಿ 30 ಲಕ್ಷ ರುಪಾಯಿಗೆ ಖರೀದಿ ಮಾಡಲಾಗಿತ್ತು. ಈಗ 50 ಕೋಟಿ ರು. ಬೆಲೆಬಾಳುತ್ತದೆ ಅಲ್ವಾ ? ಮಾರುಕಟ್ಟೆಯಲ್ಲಿ ಈಗ ಎಷ್ಟು ಬೆಲೆ ಇದೆ ? ಒಂದು ಎಕರೆಗೆ ಎಷ್ಟಿದೆ? ಚದರ ಅಡಿಗೆ ಎಷ್ಟಿದೆ? ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ, ಅದಕ್ಕೆ ಉತ್ತರವನ್ನೂ ಹೇಳುತ್ತಾ ಹೋಗಿದ್ದು ವಿಶೇಷವಾಗಿತ್ತು. ಪತ್ರಕರ್ತರ ಆಣೆಗೂ ನಾನು ಸಚಿವ ಸ್ಥಾನ ಕೇಳೇ ಇಲ್ಲ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದರು. ಸಚಿವ ಸಂಪುಟ ಪುನರ್ ರಚನೆ ಮೇ ಅಂತ್ಯಕ್ಕೆ ಆಗುತ್ತದೆ. ಹೊಸಬರಿಗೆ, ಹಿರಿಯರಿಗೆ ಅವಕಾಶ ನೀಡುತ್ತಾರೆ ಎನ್ನುವುದು ನನ್ನ ನಂಬಿಕೆ. ಆದರೆ, ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು.