Select Location
All Locations
State
Region
City / District
ರಾಜತಾಂತ್ರಿಕ ಮಾತುಕತೆ ಮೂಲಕ ಮಾತ್ರವೇ ಪಶ್ಚಿಮ ಏಷ್ಯಾ ಸಂಘರ್ಷ ಅಂತ್ಯ: ಮೋದಿ

ರಾಜತಾಂತ್ರಿಕ ಮಾತುಕತೆ ಮೂಲಕ ಮಾತ್ರವೇ ಪಶ್ಚಿಮ ಏಷ್ಯಾ ಸಂಘರ್ಷ ಅಂತ್ಯ: ಮೋದಿ

ಓಸ್ಲೋ: ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ರಷ್ಯಾ–ಉಕ್ರೇನ್‌ ಯುದ್ಧವು ರಾಜತಾಂತ್ರಿಕ ಮಾತುಕತೆ ಮೂಲಕ ಮಾತ್ರ ಅಂತ್ಯಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಬಳಿಕ ಮೋದಿ ಮಾತನಾಡಿದ್ದಾರೆ. ಭಾರತ ಮತ್ತು ನಾರ್ವೆ, ಎರಡೂ ದೇಶಗಳು ಕೂಡ ರಾಜತಾಂತ್ರಿಕ ಮಾತುಕತೆಯಲ್ಲಿ ನಂಬಿಕೆಯಿಟ್ಟಿವೆ. ಸೈನಿಕ ಕಾರ್ಯಾಚರಣೆ ಮೂಲಕ ಶಾಂತಿ ಸ್ಥಾಪನೆ ಮಾಡುವುದು ಅಸಾಧ್ಯವಾಗಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷವಾಗಿರಲಿ ಅಥವಾ ರಷ್ಯಾ–ಉಕ್ರೇನ್‌ ಯುದ್ಧವಾಗಿರಲಿ, ಅದು ಆದಷ್ಟು ಬೇಗ ಅಂತ್ಯವಾಗುವ ಮತ್ತು ಶಾಂತಿ ಸ್ಥಾಪನೆಗೆ ಕಾರಣವಾಗುವ ಎಲ್ಲಾ ಪ್ರಯತ್ನಗಳಿಗೂ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.


Prajavani 9 minutes ago
Home Flash News