Select Location
All Locations
State
Region
City / District
ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ, ಸೈನಿಕರನ್ನು ನಿಯೋಜಿಸಿದ ಪಾಕ್‌: ವರದಿ

ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ, ಸೈನಿಕರನ್ನು ನಿಯೋಜಿಸಿದ ಪಾಕ್‌: ವರದಿ

ಇಸ್ಲಾಮಾಬಾದ್‌: ಇರಾನ್‌ ಮತ್ತು ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಮಾತುಕತೆಯ ನಡುವೆ ಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ ಹಾಗೂ ಸುಮಾರು ಎಂಟು ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಹಲವು ವಾಯುನೆಲೆ, ಮೂಲಸೌಕರ್ಯಗಳ ಮೇಲೆ ಇರಾನ್‌ ದಾಳಿ ನಡೆಸಿತ್ತು. ಇನ್ನೊಂದೆಡೆ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನ ಸಂಧಾನ ಮಾತುಕತೆ ನಡೆಸುತ್ತಿದ್ದರೂ, ಸೌದಿ ಜೊತೆಗಿನ ರಕ್ಷಣಾ ಒಪ್ಪಂದದ ಅಡಿಯಲ್ಲಿ ಸಾವಿರಾರು ಸೈನಿಕರು ಹಾಗೂ ಜೆಎಫ್-17 ಯುದ್ಧ ವಿಮಾನಗಳನ್ನು ನಿಯೋಜಿಸಿದೆ.

ಅಷ್ಟೇ ಅಲ್ಲದೆ ಸೌದಿ ಅರೇಬಿಯಾದ ಮೇಲೆ ದಾಳಿ ನಡೆದರೆ ಅಗತ್ಯ ನೆರವು ನೀಡಲು ಸನ್ನದ್ಧವಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ರಕ್ಷಣಾ ಒಪ್ಪಂದದ ಭಾಗವಾಗಿ ಸುಮಾರು 8,000 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಇದು ಡ್ರೋನ್ ಹಾಗೂ ಎಚ್‌ಕ್ಯೂ-9 ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ನಡುವಣ ರಕ್ಷಣಾ ಒಪ್ಪಂದದ ಪ್ರಕಾರ, ಉಭಯ ದೇಶಗಳಲ್ಲಿ ಯಾರ ವಿರುದ್ಧ ದಾಳಿ ನಡೆದರೂ ಅದನ್ನು ಎರಡೂ ದೇಶಗಳ ಮೇಲೆ ದಾಳಿ ಎಂದು ಪರಿಗಣಿಸಲಾಗಿಸಿ ಪ್ರತಿರೋಧಿಸಲಾಗುವುದು ಎಂದು ಉಲ್ಲೇಖಿಸಿದೆ.


Prajavani 8 minutes ago
Home Flash News