Select Location
All Locations
State
Region
City / District
Theft Case: ದೇಗುಲದ ಹುಂಡಿ ಒಡೆದು 10 ಸಾವಿರ ಹಣ ಕದ್ದ ಬಿಜೆಪಿ ಅಭ್ಯರ್ಥಿ! ಸಿಕ್ಕಿಬೀಳ್ತಿದ್ದಂತೆ ಗೊಳೋ ಎಂದು ಕಣ್ಣೀರು!

Theft Case: ದೇಗುಲದ ಹುಂಡಿ ಒಡೆದು 10 ಸಾವಿರ ಹಣ ಕದ್ದ ಬಿಜೆಪಿ ಅಭ್ಯರ್ಥಿ! ಸಿಕ್ಕಿಬೀಳ್ತಿದ್ದಂತೆ ಗೊಳೋ ಎಂದು ಕಣ್ಣೀರು!

ಪಾಲಕ್ಕಾಡ್: ಪ್ರಸಿದ್ಧ ದೇವಸ್ಥಾನವೊಂದಕ್ಕೆ ನಡುರಾತ್ರಿ ನುಗ್ಗಿ ದೇವಳದ ಹುಂಡಿಯಿಂದ 10 ಸಾವಿರ ರೂಪಾಯಿ ಕದ್ದ (Theft Case) ಆರೋಪದ ಮೇಲೆ ಬಿಜೆಪಿಯ ಸ್ಥಳೀಯ ಮಹಿಳಾ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೇರಳದ ಪಾಲಕ್ಕಾಡ್‌ನ ಕೊಲ್ಲೆಂಗೋಡ್ ಬಳಿಯ ಪುಳಕ್ಕಲ್ಥರದಲ್ಲಿ ನಡೆದಿದ್ದು, ಇಲ್ಲಿನ ದೇವಾಲಯದ ಕಾಣಿಕೆ ಹುಂಡಿಯನ್ನು ಒಡೆದು ನಗದು ಕದ್ದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ದೇವಾಲಯದ ಆವರಣ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮಾಡಿದಯ ನಂತರ ಕಣಿಮಂಗಲಂನ ಚೆರುವಿಲ್ ಹೌಸ್‌ನ 42 ವರ್ಷದ ಆರೋಪಿ ಮಹಿಳೆ ಪ್ರಭಾವತಿ ಎಂಬಾಕೆಯನ್ನು ಬಂಧಿಸಲಾಯಿತು.

ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಪುಳಕ್ಕಲ್ಥರ ಮಾರಿಯಮ್ಮನ್ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಮುಂಭಾಗದಲ್ಲಿರುವ ಕಾಣಿಕೆ ಹುಂಡಿಯ ಬೀಗವನ್ನು ಒಡೆದು ಸುಮಾರು ₹10,000 ಕದಿಯಲಾಗಿದೆ ಎಂದು ಆರೋಪಿಸಲಾಗಿದೆ. ಶನಿವಾರ ಬೆಳಿಗ್ಗೆ ದೇವಾಲಯದ ಪದಾಧಿಕಾರಿಗಳು ಮತ್ತು ಅರ್ಚಕರು ದಿನದ ಪೂಜಾ ಕಾರ್ಯಗಳಿಗಾಗಿ ದೇಗುಲಕ್ಕೆ ಬಂದಾಗ ಕಾಣಿಕೆ ಹುಂಡಿ ಒಡೆದು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ದೇವಾಲಯದ ಪದಾಧಿಕಾರಿಗಳು ಮತ್ತು ಅರ್ಚಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದರು, ಅದರಲ್ಲಿ ರಾತ್ರಿಯ ವೇಳೆ ಮಹಿಳೆಯೊಬ್ಬಳು ಕಾಣಿಕೆ ಪೆಟ್ಟಿಗೆಯನ್ನು ಒಡೆದು ತೆರೆಯುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.


News18 Kannada 1 hour ago
Home Flash News