Andaman: ಬದಲಾಗುತ್ತಾ ಭಾರತದ ಭವಿಷ್ಯ? ಅಂಡಮಾನ್ನಲ್ಲಿ ಭಾರೀ ಪ್ರಮಾಣದಲ್ಲಿ ಪತ್ತೆಯಾದ ಗ್ಯಾಸ್ ನಿಕ್ಷೇಪ, ವಿಡಿಯೋ!
ಭಾರತ ಪೂರ್ವ ಕರಾವಳಿಯ ದ್ವೀಪಗಳಲ್ಲಿ (Andaman Sea) ಭಾರೀ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿದೆ. ಅಂಡಮಾನ್ ಪೂರ್ವ ತೀರದ 15 ಕಿಲೋ ಮೀಟರ್ ದೂರದ ಶ್ರೀ ವಿಜಯಪುರಂ-03 ಬಳಿ (Sri Vijayapuram-3) ಗ್ಯಾಸ್ ನಿಕ್ಷೇಪಗಳು ಪತ್ತೆಯಾಗಿರೋದಾಗಿ ಕೇಂದ್ರ ಘೋಷಣೆ ಮಾಡಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಉತ್ಖನನದಲ್ಲಿ ಸಮುದ್ರ ಆಳದ 355 ಮೀಟರ್ ಕೆಳಭಾಗದಲ್ಲಿ ನಿಕ್ಷೇಪ ಪತ್ತೆಯಾಗಿರೋದಾಗಿ (Natural Gas) ಗುರುತಿಸಿದ್ದಾರೆ. ಭಾರತದ ಕರಾವಳಿ ಪರಿಶೋಧನಾ ಪ್ರಯತ್ನಗಳು ಒಂದು ಪ್ರಮುಖ ಪ್ರಗತಿಯಾಗಿದೆ ಎಂದು ಎಕ್ಸ್ ನಲ್ಲಿ ಪೆಟ್ರೋಲಿಯಂ ಸಚಿವ (Hardeep Singh Puri) ವಿಡಿಯೋ ಶೇರ್ ಮಾಡಿದ್ದಾರೆ.
ಸಮುದ್ರದಲ್ಲಿ ಗರ್ಭದ ಸುಮಾರು 355 ಮೀಟರ್ ಆಳದಲ್ಲಿ ನೈಸರ್ಗಿಕ ನಿಕ್ಷೇಪಗಳನ್ನು ಗುರುತಿಸಿದ್ದಾರೆ. ಈಯೋಸೀನ್ ಸ್ತರದಲ್ಲಿ 1,900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ನಡೆಸಲಾದ ಪ್ರಾಥಮಿಕ ಉತ್ಪಾದನಾ ಪರೀಕ್ಷೆಗಳಲ್ಲಿ ಗ್ಯಾಸ್ ಇರೋದು ಪತ್ತೆಯಾಗಿದೆ. ಸದ್ಯ ಗ್ಯಾಸ್ ನ ಗುಣಮಟ್ಟ, ಅದರ ಕ್ಯಾಲೋರಿಫಿಕ್ ಮೌಲ್ಯ ಅಂದಾಜು ಮಾಡಲು ಆಯಿಲ್ ಇಂಡಿಯಾ ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆಯಿಲ್ ಇಂಡಿಯಾ ಅನ್ವಯ, ಅಂಡಮಾನ್ ಬೆಸಿನ್ ನಲ್ಲಿ ನಡೆಯುತ್ತಿರುವ ಅನ್ವೇಷಣೆಯ ಭಾಗವಾಗಿ ಮೂರು ಭಾವಿಗಳನ್ನು ಉತ್ಖನನ ಮಾಡುತ್ತಿದ್ದು, ಇದರಲ್ಲಿ ಎರಡು ಭಾವಿಗಳಲ್ಲಿ ಹೈಡ್ರೋಜನ್ ಕರ್ಬನ್ ಇರೋದು ಖಚಿತವಾಗಿದೆ.