Select Location
All Locations
State
Region
City / District
ಟಾಲಿವುಡ್‌ನಲ್ಲಿ ಸಾಲು ಸಾಲು ಸೀಕ್ವೆಲ್:‌ ಅನೌನ್ಸ್‌ ಆದ್ರೂ ವಿಳಂಬವಾಗುತ್ತಿರುವುದೇಕೆ?

ಟಾಲಿವುಡ್‌ನಲ್ಲಿ ಸಾಲು ಸಾಲು ಸೀಕ್ವೆಲ್:‌ ಅನೌನ್ಸ್‌ ಆದ್ರೂ ವಿಳಂಬವಾಗುತ್ತಿರುವುದೇಕೆ?

ಹೈದರಾಬಾದ್: ಟಾಲಿವುಡ್‌(Tollywood) ಸ್ಟಾರ್ಸ್ ಸೀಕ್ವೆಲ್‌ ಟ್ರೆಂಡ್‌ನೊಂದಿಗೆ ಮುಂದುವರೆಯುತ್ತಿದ್ದಾರೆ. ಪವನ್ ಕಲ್ಯಾಣ್, ಪ್ರಭಾಸ್, ಜೂ. ಎನ್‌ಟಿಆರ್ ಮತ್ತು ಅಲ್ಲು ಅರ್ಜುನ್.. ಮುಂತಾದ ನಟರು ತನ್ನ ಸೀಕ್ವೆಲ್ ಸಿನಿಮಾಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ʼಸಲಾರ್‌ -2ʼ, ʼದೇವರ -2ʼ, ʼಒಜಿ -2ʼ.. ಹೀಗೆ ಸಾಲು ಸಾಲು ಸೀಕ್ವೆಲ್‌ಗಳು ಬರುವುದು ಪಕ್ಕಾ ಆಗಿದ್ರೂ, ಸೆಟ್ಟೇರಲು ವಿಳಂಬವಾಗುತ್ತಿದೆ. ಸೀಕ್ವೆಲ್‌ಗಳು ವಿಳಂಬವಾಗುತ್ತಿರುವುದ್ದೇಕೆ ಎನ್ನುವುದರ ಕುರಿತ ಒಂದು ವರದಿ ಇಲ್ಲಿದೆ.. ದೇವರ: ಪಾರ್ಟ್ 2 (Devara 2): 'ದೇವರ: ಪಾರ್ಟ್ 2' ಚಿತ್ರದ ಕೆಲಸಗಳು ಹಲವು ಬಾರಿ ವಿಳಂಬವಾಗಿದ್ದು, ಪ್ರಸ್ತುತ ನಿಂತುಹೋಗಿವೆ ಎನ್ನಲಾಗಿದೆ. ನಾಯಕ ನಟ ಜೂ. ಎನ್‌ಟಿಆರ್ (Jr NTR') ಮತ್ತು ನಿರ್ದೇಶಕ ಕೊರಟಲ ಶಿವ ಮತ್ತಷ್ಟು ಪ್ರಬಲವಾದ ಚಿತ್ರಕಥೆಗಾಗಿ ಕಾಯುತ್ತಿದ್ದಾರೆ. 

ನಿರ್ದೇಶಕರು ಕಥೆಯನ್ನು ಪೂರ್ಣಗೊಳಿಸಿದ್ದರೂ, ಜೂ. ಎನ್‌ಟಿಆರ್ ಅವರ ಬ್ಯುಸಿ ಶೆಡ್ಯೂಲ್ ಕೂಡ ಚಿತ್ರ ಆರಂಭವಾಗಲು ತಡೆಯಾಗಿದೆ. ‌ ಇದನ್ನೂ ಓದಿ: ಖ್ಯಾತ ಸೋಶಿಯಲ್‌ ಮೀಡಿಯಾ ಪ್ರಭಾವಿ ಅಖಿಲ್ ಪತ್ನಿ ರಾತ್ರೋರಾತ್ರಿ ಕಂಡಕ್ಟರ್‌ ಜತೆ ಎಸ್ಕೇಪ್.!‌ ಎನ್‌ಟಿಆರ್ ಪ್ರಸ್ತುತ 'ಡ್ರ್ಯಾಗನ್' ಚಿತ್ರದ ಎರಡು ಭಾಗಗಳ ಮೇಲೆ ಗಮನ ಹರಿಸುತ್ತಿದ್ದು, 'ದೇವರ 2' ಚಿತ್ರಕ್ಕೆ ಇನ್ನಷ್ಟು ಬಲವಾದ ಕಥೆ ರೂಪುಗೊಂಡ ನಂತರವಷ್ಟೇ ಚಿತ್ರೀಕರಣಕ್ಕೆ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ನಿರ್ದೇಶಕ ಶಿವ ಅವರು ನಂದಮೂರಿ ಬಾಲಕೃಷ್ಣ ಅವರ ಮುಂದಿನ ಸಿನಿಮಾದತ್ತ ಗಮನ ಹರಿಸಿರುವುದರಿಂದ 'ದೇವರ 2' ಭವಿಷ್ಯ ಸದ್ಯಕ್ಕೆ ಅನಿಶ್ಚಿತವಾಗಿದೆ.

ʼದೇವರʼ ದೊಡ್ಡಮಟ್ಟದಲ್ಲಿ ಹಿಟ್‌ ಆಗುತ್ತದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೌಂಡ್‌ ಮಾಡಲಿಲ್ಲ. ಹೀಗಾಗಿ ಎರಡನೇ ಭಾಗಕ್ಕೆ ಪ್ರಬಲವಾದ ಕಥೆ ಅನಿವಾರ್ಯ. ʼದೇ ಕಾಲ್ ಹಿಮ್ ಒಜಿʼ (OG) ಸೀಕ್ವೆಲ್: ಪವನ್ ಕಲ್ಯಾಣ್ (Pawan Kalyan) ಅಭಿನಯದ 'ದೇ ಕಾಲ್ ಹಿಮ್ ಒಜಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ನಿರ್ದೇಶಕ ಸುಜೀತ್ ಎರಡನೇ ಭಾಗದ ಕಥೆಯನ್ನು ಅಂತಿಮಗೊಳಿಸಿದ್ದು, ಪವನ್ ಕೂಡ ಈ ಪ್ರಾಜೆಕ್ಟ್ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ, ಸದ್ಯ ಪವನ್ ಕಲ್ಯಾಣ್ ತಮ್ಮ ಆರೋಗ್ಯ ಮತ್ತು ರಾಜಕೀಯ ಬದ್ಧತೆಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ. 

ಮೊದಲ ಭಾಗಕ್ಕಿಂತ ಎರಡನೇ ಭಾಗದ ತಾಂತ್ರಿಕ ಅಂಶಗಳು ಮತ್ತು ಕಥೆ ಅದ್ಭುತವಾಗಿರಬೇಕು ಎಂಬುದು ಪವನ್ ಅವರ ಇಚ್ಛೆಯಾಗಿದ್ದು, ಕಥೆಯ ಬಗ್ಗೆ ಸಂಪೂರ್ಣ ತೃಪ್ತಿ ಸಿಗುವವರೆಗೆ ಚಿತ್ರೀಕರಣ ಆರಂಭಿಸದಿರಲು ನಿರ್ಧರಿಸಿದ್ದಾರೆ. ನಿರ್ದೇಶಕ ಸುಜೀತ್ ತಮ್ಮ 'ಬ್ಲಡಿ ರೋಮಿಯೋ' ಚಿತ್ರವನ್ನು ಪೂರ್ಣಗೊಳಿಸಿದ ನಂತರ, ಅಂದರೆ 2027ರ ಬೇಸಿಗೆಯ ಬಳಿಕ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಅಲ್ಲು ಅರ್ಜುನ್: ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ʼಪುಷ್ಪ -2ʼ ಬಳಿಕ ಈಗ ಅಟ್ಲಿ ಕುಮಾರ್‌ ಅವರ ಜತೆ ಬಿಗ್‌ ಬಜೆಟ್‌ ʼರಾಕಾʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಪುಷ್ಪ ʼ ಅಂತಿಮ ಭಾಗದಲ್ಲಿ ಅರ್ಜುನ್‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2028ರ ವೇಳೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


Udayavani 13 days ago
Home Flash News