Congo: ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ: ಕನಿಷ್ಠ 25 ನಾಗರಿಕರ ಭೀಕರ ಹ*ತ್ಯೆ
ಗೋಮಾ, ಕಾಂಗೋ: ಪೂರ್ವ ಕಾಂಗೋದಲ್ಲಿ ಇಸ್ಲಾಮಿಕ್ ಸ್ಟೇಟ್ (IS) ಬೆಂಬಲಿತ ಉಗ್ರಗಾಮಿ ಗುಂಪು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 25 ನಾಗರಿಕರು ಬಲಿಯಾಗಿದ್ದಾರೆ ಎಂದು ಇಟುರಿ ಪ್ರಾಂತ್ಯದ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.
ಅಲೈಡ್ ಡೆಮಾಕ್ರಟಿಕ್ ಫೋರ್ಸ್ (ADF) ಉಗ್ರರು ಇಟುರಿ ಪ್ರಾಂತ್ಯದ ಅಪಕುಲು ಗ್ರಾಮಕ್ಕೆ ನುಗ್ಗಿ ಈ ನರಮೇಧ ನಡೆಸಿದ್ದಾರೆ. ದಾಳಿಯ ವೇಳೆ 15 ಪುರುಷರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಜೀವಂತವಾಗಿ ಸುಡಲಾಗಿದೆ. ಉಳಿದ ಏಳು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದರೆ, ವೇಲ್ಸ್ ವೊಂಕುಟು ಪ್ರದೇಶದಲ್ಲಿ ಮೂವರು ಬಲಿಯಾಗಿದ್ದಾರೆ. "ಇದು ಕೇವಲ ದಾಳಿಯಲ್ಲ, ಇದೊಂದು ನೈಜ ನರಮೇಧ. ಮುಂಜಾನೆ 4 ಗಂಟೆ ಸುಮಾರಿಗೆ ಉಗ್ರರು ಏಕಾಏಕಿ ನುಗ್ಗಿ ಈ ಭೀಕರ ಕೃತ್ಯ ಎಸಗಿದ್ದಾರೆ," ಎಂದು ಮಾನವ ಹಕ್ಕುಗಳ ಗೌರವ ಅಧ್ಯಕ್ಷ ಕ್ರಿಸ್ಟೋಫ್ ಮುನ್ಯಾಂಡೇರು ಆತಂಕ ವ್ಯಕ್ತಪಡಿಸಿದ್ದಾರೆ.