... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್‌ಗೆ ಆಸರೆಯಾದ ರಷ್ಯಾದ ಗೇಮ್‌ಚೇಂಜರ್‌ ಅಸ್ತ್ರ

ಇರಾನ್‌ಗೆ ಆಸರೆಯಾದ ರಷ್ಯಾದ ಗೇಮ್‌ಚೇಂಜರ್‌ ಅಸ್ತ್ರ; 18 ಲಕ್ಷದ ಡ್ರೋನ್‌ ಮೂಲಕ 818 ಕೋಟಿಯ ಯುದ್ಧವಿಮಾನ ಉಡೀಸ್‌!

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಇರಾನ್ ತನ್ನ ಅಪಾಯಕಾರಿ ಡ್ರೋನ್ ತಂತ್ರಜ್ಞಾನದ ಮೂಲಕ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೌದಿ ಅರೇಬಿಯಾದಿಂದ ಕುವೈತ್‌ವರೆಗೆ ಇರಾನ್ ತನ್ನ ವಿನಾಶಕಾರಿ ದಾಳಿಯನ್ನು ವಿಸ್ತರಿಸಿದೆ. ಸೋಮವಾರ ಒಂದೇ ದಿನ ಇರಾನ್ ಸುಮಾರು 17 ದೇಶಗಳ ಮೇಲೆ ಡ್ರೋನ್ ದಾಳಿ ನಡೆಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. 'ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, ಯುದ್ಧದ ಮೊದಲ ದಿನವೇ ಇರಾನ್ ಬರೋಬ್ಬರಿ 1,000 ಡ್ರೋನ್‌ಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ 200 ಡ್ರೋನ್‌ಗಳು ದುಬೈ ಮೇಲೆ ದಾಳಿ ನಡೆಸಿವೆ. ನಂತರದ ದಿನಗಳಲ್ಲಿ ಕುವೈತ್ ಮತ್ತು ಸೌದಿಯ ತೈಲ ಕಂಪನಿಗಳ ಮೇಲೂ ಇದೇ ಡ್ರೋನ್‌ ಬಳಸಿ ದಾಳಿ ಮಾಡಿದೆ.
ಸೌದಿ ತೈಲ ಕಂಪನಿ 'ಅರಾಮ್ಕೊ' ಟಾರ್ಗೆಟ್‌ ಸೌದಿ ಅರೇಬಿಯಾದ ಶ್ರೀಮಂತ ತೈಲ ಕಂಪನಿ ಅರಾಮ್ಕೊ (Aramco) ಕಾರ್ಯಾಚರಣೆ ನಡೆಸುವ ತನುರಾ ರಿಫೈನರಿಯನ್ನು ಇರಾನ್ ಗುರಿಯಾಗಿಸಿಕೊಂಡಿದೆ. ಟರ್ಕಿ ಮತ್ತು ಕತಾರ್ ದೇಶಗಳ ಮೇಲೂ ಡ್ರೋನ್ ದಾಳಿಗಳು ನಡೆಸಿರುವುದಾಗಿ ಇರಾನ್‌ ಹೇಳಿದೆ. ತನುರಾ ರಿಫೈನರಿ ಮೇಲೆ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ ಬಹಳ ಗಂಭೀರವಾಗಿ ಪರಿಗಣಿಸಿದೆ. ಜಗತ್ತಿನ ಅತ್ಯಂತ ಅಪಾಯಕಾರಿ 'ಷಾಹೆದ್-136' ಡ್ರೋನ್ ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹಾವಳಿ ಎಬ್ಬಿಸಿದ್ದ 'ಷಾಹೆದ್-136' (Shahed-136) ಡ್ರೋನ್‌ಗಳನ್ನು ಈಗ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳ ಮೇಲೆ ಪ್ರಯೋಗಿಸುತ್ತಿದೆ. ಇದು ಸತತವಾಗಿ ಹಲವು ಗಂಟೆಗಳ ಕಾಲ ಆಕಾಶದಲ್ಲಿ ಹಾರಬಲ್ಲದು. ಏಕಕಾಲದಲ್ಲಿ 2,000 ಕಿಲೋಮೀಟರ್ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಇದಕ್ಕಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಡ್ರೋನ್‌ನಲ್ಲಿ ಸ್ಫೋಟಕಗಳನ್ನು ತುಂಬಿಸಲಾಗಿರುತ್ತದೆ. ಇದು ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದ ತಕ್ಷಣ ಭೀಕರವಾಗಿ ಸ್ಫೋಟಗೊಳ್ಳುತ್ತದೆ.

Source : Asianet News

2 hours ago

Home Flash News