Parameshwar: ಖಮೇನಿ ಸಾವಿಗೆ ಬೆಂಗಳೂರಲ್ಲಿ ಪ್ರೊಟೆಸ್ಟ್; ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
ಬೆಂಗಳೂರು : ಇರಾನ್ (Iran) ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ಹತ್ಯೆಗೆ ಹಲವೆಡೆ ಕೂಡ ಆಕ್ರೋಶ ವ್ಯಕ್ತವಾಗ್ತಿದೆ. ಬೆಂಗಳೂರಿನಲ್ಲೂ (Bengaluru) ಖಮೇನಿ ಸಾವು ಖಂಡಿಸಿ ಪ್ರತಿಭಟನೆ ನಡೆಯಿತು. ಈ ವೇಳೆ ಹೋರಾಟಗಾರರು ರಸ್ತೆಗಿಳಿದು ಅಳುತ್ತಾ ಅಮೆರಿಕಾ (America) ವಿರುದ್ಧ ಗುಡುಗಿದ್ರು. ಖಮೇನಿ ಹತ್ಯೆ ಖಂಡಿಸಿ ಬೀದಿಗಿಳಿದು ಪ್ರತಿಭಟನೆ (Protest) ನಡೆಸಿದವರ ವಿರುದ್ಧ ಕ್ರಮದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾತಾಡಿದ್ದು, ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಕಿಡಿ
ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ ಗೃಹ ಸಚಿವ ಪರಮೇಶ್ವರ್ ಅವ್ರು, ಪ್ರತಿಭಟನೆ ಮಾಡಿದ್ದು ನಿಯಮಬಾಹಿರ ಎಂದಿದ್ದಾರೆ. ಈಗಾಗಲೇ ಕೋರ್ಟ್ ಹೇಳಿದ್ದು, ಪ್ರತಿಭಟನೆ ಮಾಡುವವರು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡಿ ಅಂತ ಆದ್ರೆ ಮೊನ್ನೆ ರಸ್ತೆಗಳಲ್ಲೇ ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವರು ಗರಂ ಆದ್ರು.
ಕ್ರಮದ ಬಗ್ಗೆ ಚರ್ಚಿಸಿ ನಿರ್ಧಾರ-ಪರಂ
ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡ್ತೇನೆ.
ಹೋರಾಟದಲ್ಲಿ ಭಾಗಿಯಾಗಿದ್ದ ಹ್ಯಾರೀಸ್ ಇರಲಿ, ಯಾರೇ ಇರಲಿ ನಿಯಮಾನುಸಾರ ಪ್ರತಿಭಟನೆ ಮಾಡಬೇಕು. ತಪ್ಪಾಗಿದ್ರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ. ಖಮೇನಿ ಸಾವು ಹಿನ್ನೆಲೆಯಲ್ಲಿ ನಿಗಾ ಇಡಲು ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ ಕಳುಹಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವ್ರು, ಆ ರೀತಿಯ ಪತ್ರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಡಿಜಿ ಅವರು ನನಗೆ ಏನೂ ಹೇಳಿಲ್ಲ ಎಂದಿದ್ದಾರೆ.