... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಸಂಪುಟ ಪುನಾರಚನೆಗೆ ಹೆಚ್ಚಿದ ಒತ್ತಡ;

Karnataka Politics: ಸಂಪುಟ ಪುನಾರಚನೆಗೆ ಹೆಚ್ಚಿದ ಒತ್ತಡ; ದೆಹಲಿಗೆ ತೆರಳಲು 30ಕ್ಕೂ ಹೆಚ್ಚು ಹಿರಿಯ ಶಾಸಕರ ಸಿದ್ಧತೆ

ಬೆಂಗಳೂರು (ಮಾ.13): ರಾಜ್ಯ ಕಾಂಗ್ರೆಸ್​​ನಲ್ಲಿ (Congress) ಡಿನ್ನರ್ ಪಾಲಿಟಿಕ್ಸ್ (Dinner Politics) ಜೋರಾಗಿದೆ. ಇದರ ನಡುವೆ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದು, ​ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೇರಲು ಮುಂದಾಗಿದ್ದಾರೆ. 30ಕ್ಕೂ ಹೆಚ್ಚು ಶಾಸಕರಿಂದ (MLA) ದೆಹಲಿ ದಂಡಯಾತ್ರೆಗೆ ಸಿದ್ದತೆ ನಡೆದಿದೆ. ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ಹಿರಿಯ ಶಾಸಕರ ರಣತಂತ್ರ ರೂಪಿಸಿದ್ದು, ಮಾರ್ಚ್ 26 ರಂದು ರಾತ್ರಿ ಬೆಂಗಳೂರಿಂದ (Bengaluru) ದೆಹಲಿಗೆ ತೆರಳಲಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕರು ಸಭೆ ನಿನ್ನೆ (ಮಾ 12) ರಾತ್ರಿ ಕಾಂಗ್ರೆಸ್ ಹಿರಿಯ ಶಾಸಕರು ಕೂಡ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಕೆಲ ಹಿರಿಯ ಶಾಸಕರು ನಿನ್ನೆಯ ಸಭೆಯಲ್ಲಿ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದು, ಅಧಿವೇಶನದ ಬಳಿಕ ಹೈಕಮಾಂಡ್‌ ನಾಯಕರನ್ನ ಭೇಟಿ ಮಾಡಿ ಸಂಪುಟ ಪುನಾರಚನೆ ಒತ್ತಡ ಹೇರುವುದಾಗಿ ಶಾಸಕರು ತಿಳಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿ ಅಶೋಕ್ ಪಟ್ಟಣ್ ರಿಯಾಕ್ಷನ್ ಹಿರಿಯ ಶಾಸಕರ ಸಭೆ ಬಗ್ಗೆ ಮಾತಾಡಿದ ಅಶೋಕ್ ಪಟ್ಟಣ್, ಸಂಪುಟದಲ್ಲಿರೋ ಕೆಲವು ಮಂತ್ರಿಗಳು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಇನ್ನೂ ಕೆಲವರು ಕೈಗೆ ಸಿಗೋದಿಲ್ಲ. ಹೈ ಕಮಾಂಡ್ ನಾಯಕರು ಕೂಡ ಹೇಳಿದ್ರೂ, ಎರಡೂವರೆ ವರ್ಷ ಆದ ನಂತ್ರ ರೀ ಶಫಲ್ ಆಗುತ್ತೆ ಅಂತ. ಹೀಗಾಗಿ ಹೊಸಬರಿಗೆ ಅವಕಾಶ ನೀಡ್ಬೇಕು ಎಂದಿದ್ದಾರೆ.
ನಾವು ಶೀಘ್ರದಲ್ಲೇ ದೆಹಲಿಗೆ ಹೋಗಲಿದ್ದೇವೆ ಎಂದ ಶಾಸಕ ಅಶೋಕ್ ಪಟ್ಟಣ್, ಅಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡ್ತೇವೆ. ಈಗ ಬಜೆಟ್ ನಡೆಯೋದ್ರಿಂದ ನೋಡಿ ಹೋಗ್ತೇವೆ ಎಂದಿದ್ದಾರೆ. 'ನಮಗೂ ಮಂತ್ರಿಗಿರಿ ಸ್ಥಾನ ಕೊಡ್ಬೇಕು' ಶಾಸಕ ಸಭೆ ಬಗ್ಗೆ ಮಾತಾಡಿದ ಬೇಳೂರು ಗೋಪಾಲಕೃಷ್ಣ ಅವ್ರು, ಇಲ್ಲಿ ಸಮಾನ ಮನಸ್ಕ ಹಿರಿಯ ಶಾಸಕರು ಸೇರಿದ್ದೆವು. 2028ಕ್ಕೂ ಕೂಡ ಸರ್ಕಾರ ಅಧಿಕಾರಕ್ಕೆ ಬರಬೇಕು. ನಮಗೂ ಮಂತ್ರಿಗಿರಿ ಸ್ಥಾನ ಕೊಡ್ಬೇಕು. ಅದಕ್ಕೆ ಬೌರಿಂಗ್ ಕ್ಲಬ್ ನಲ್ಲಿ 25 ರಿಂದ 27 ಶಾಸಕರು ಸೇರಿ ಮಾತುಕತೆ ಮಾಡಿದ್ದೇವೆ ಎಂದ್ರು.

Source : News18 Kannada

2 hours ago

Home Flash News