... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ನಿಜವಾದ ಸವಾಲು ಈಗ ಆರಂಭ

Iran Major Decision: ನಿಜವಾದ ಸವಾಲು ಈಗ ಆರಂಭ, ಇರಾನ್​​ನ ಈ ಒಂದು ನಿರ್ಧಾರದಿಂದ ಇಡೀ ಪ್ರಪಂಚವೇ ಬೆಲೆ ತೆರಬೇಕಾಗುತ್ತೆ!

ಇಸ್ರೇಲ್-ಇರಾನ್ ಯುದ್ಧಕ್ಕೆ (Israel Iran War) ಕದನ ವಿರಾಮ (Ceasefire) ಘೋಷಣೆಯಾಗಿದ್ದರೂ, ಜಗತ್ತಿನ ಮೇಲೆ ಹೊಸ ಬಿಕ್ಕಟ್ಟು ಆರಂಭವಾಗಿದೆ. ಈಗಾಗಲೇ ಈ ಇಸ್ರೇಲ್​, ಇರಾನ್​ ಮತ್ತು ಅಮೆರಿಕ ಯುದ್ಧದಿಂದ ಹಲವು ದೇಶಗಳು ಸಂಕಷ್ಟ ಅನುಭವಿಸಿವೆ. ಆದರೆ ಇದೀಗ ನಿಜವಾದ ಸಂಕಷ್ಟ ಶುರುವಾಗಲಿದೆ. ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು (Strait Of Hormuz) ಮುಚ್ಚಿದ್ದ ಇರಾನ್, ಈಗ ಜಲಸಂಧಿ ತೆರೆಯುತ್ತಿದೆ. ಆದರೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಇಡೀ ವಿಶ್ವ ಈಗ ಬೆಲೆ ತೆರಬೇಕಾಗಿದೆ. ಇರಾನ್​ ಈ ಹಿಂದೆ ಉಚಿತವಾಗಿದ್ದ ಕೆಲಸಕ್ಕೆ ಎಲ್ಲಾ ದೇಶಗಳಿಂಧ ಕೋಟ್ಯಂತರ ರೂ. ಶುಲ್ಕ ವಿಧಿಸಲು ಪ್ರಾರಂಭಿಸಿದೆ. 

ಇದು ಈಗ ಯುದ್ಧದ ನಷ್ಟವನ್ನು ಇಡೀ ಪ್ರಪಂಚದಿಂದ ಮರುಪಡೆಯುತ್ತಿದೆ ಎಂದು ಹೇಳಲಾಗಿದೆ. ಹಾರ್ಮುಜ್​ ಜಲಸಂಧಿಯಲ್ಲಿ ಟೋಲ್​​​ ಶುಲ್ಕ ವಿಧಿಸಲು ಮುಂದಾದ ಇರಾನ್​! ಹೌದು, ಇರಾನ್​ ಇದೀಗ ಹಾರ್ಮುಜ್​ ಜಲಸಂಧಿ ಸಂಬಂಧ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪ್ರತಿ ವಾಣಿಜ್ಯ ಹಡಗಿನಿಂದ ಕೋಟ್ಯಂತರ ರೂಪಾಯಿ ಶುಲ್ಕ (ಟೋಲ್) ವಸೂಲಿ ಮಾಡಲು ಆರಂಭಿಸಿದೆ. ಬ್ಲೂಮ್‌ಬರ್ಗ್ ವರದಿ ಪ್ರಕಾರ, ಇರಾನ್ ಪ್ರತಿ ಹಡಗಿಗೆ ಸುಮಾರು 2 ಮಿಲಿಯನ್ ಡಾಲರ್ (ಸುಮಾರು 18 ಕೋಟಿ ರೂಪಾಯಿ) ಶುಲ್ಕ ವಿಧಿಸುತ್ತಿದೆ. ಇದು ವಿಶ್ವದ ತೈಲ ಮತ್ತು ಅನಿಲ ಸಾಗಣೆಗೆ ದೊಡ್ಡ ಹೊಡೆತವಾಗಿದೆ. ಇದು ಈ ಹಿಂದೆ ಉಚಿತವಾಗಿದ್ದ ಕೆಲಸಕ್ಕೆ ಶುಲ್ಕ ವಿಧಿಸುವ ಪ್ರಕ್ರಿಯೆ ಎಂದು ಹೇಳಲಾಗಿದೆ. ಹಾರ್ಮುಜ್ ಜಲಸಂಧಿ ಎಂದರೇನು? ವಿಶ್ವದ ತೈಲ ಪೂರೈಕೆಯ 20%ಕ್ಕಿಂತ ಹೆಚ್ಚು ಈ ಜಲಸಂಧಿಯ ಮೂಲಕ ಹಾದುಹೋಗುತ್ತದೆ.

 ಭಾರತವು ತನ್ನ ತೈಲ ಮತ್ತು ಅನಿಲದ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣವನ್ನು ಈ ಮಾರ್ಗದಿಂದಲೇ ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಸಮಯದಲ್ಲಿ ಇರಾನ್ ಈ ಜಲಸಂಧಿಯನ್ನು ಮುಚ್ಚಿದ್ದರಿಂದ ತೈಲ ಬೆಲೆಗಳು ಗಗನಕ್ಕೇರಿದ್ದವು. ಈಗ ಯುದ್ಧ ನಿಂತಿದೆ, ಆದರೆ ಇರಾನ್ ಜಲಸಂಧಿ ತೆರೆಯುತ್ತಿದ್ದರೂ ‘ಟೋಲ್’ ಹೆಸರಿನಲ್ಲಿ ದೊಡ್ಡ ಮೊತ್ತ ವಸೂಲಿ ಮಾಡಲು ಮುಂದಾಗಿದೆ. ಇರಾನ್ ಏಕೆ ಈ ಕ್ರಮ ಕೈಗೊಂಡಿದೆ? ಯುದ್ಧದಲ್ಲಿ ಇರಾನ್‌ಗೆ ತುಂಬಾ ನಷ್ಟವಾಗಿದೆ. ಆ ನಷ್ಟವನ್ನು ಜಗತ್ತಿನಿಂದಲೇ ವಸೂಲಿ ಮಾಡುವ ಉದ್ದೇಶದಿಂದ ಇರಾನ್ ಈ ಹೊಸ ಟೋಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕೆಲವು ಹಡಗುಗಳು ಈಗಾಗಲೇ ಈ ಶುಲ್ಕ ಪಾವತಿಸಿವೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಇರಾನ್ ಈ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿಲ್ಲ. ಶುಲ್ಕವನ್ನು ಯಾವ ಕರೆನ್ಸಿಯಲ್ಲಿ ವಸೂಲಿ ಮಾಡುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Source : News18 Kannada

2 hours ago

Home Flash News