... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್; ಫ್ಯಾನ್ಸ್​ಗೆ ಇಲ್ಲಿದೆ ಪ್ರಮುಖ ಸೂಚನೆಗಳು!

ಬಹುನಿರೀಕ್ಷಿತ 19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಜ್ವರ ಏರತೊಡಗಿದ್ದು, ಪಂದ್ಯಗಳ ಸುಗಮ ನಿರ್ವಹಣೆ ಮತ್ತು ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು: ಬಹುನಿರೀಕ್ಷಿತ 19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಜ್ವರ ಏರತೊಡಗಿದ್ದು, ಪಂದ್ಯಗಳ ಸುಗಮ ನಿರ್ವಹಣೆ ಮತ್ತು ಭದ್ರತೆಗಾಗಿ ಬೆಂಗಳೂರು ಪೊಲೀಸರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

ಮುಂದುವರಿದ ಭಾಗವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಯ ಕುರಿತು ಬೃಹತ್ ‘ಮಾಕ್ ಡ್ರಿಲ್’ (ಅಣುಕು ಪ್ರದರ್ಶನ) ನಡೆಸಲಾಗಿದೆ.  ಮುಂಜಾನೆ 10 ಗಂಟೆಯಿಂದಲೇ ಆರಂಭವಾದ ಈ ಅಣುಕು ಪ್ರದರ್ಶನದಲ್ಲಿ ಬೆಂಗಳೂರು ಪೊಲೀಸರೊಂದಿಗೆ ರಾಷ್ಟ್ರೀಯ ಭದ್ರತಾ ಪಡೆ ಕೂಡ ಕೈಜೋಡಿಸಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಅಭ್ಯಾಸದಲ್ಲಿ ಭಾಗಿಯಾಗಿದ್ದು, ಸ್ಟೇಡಿಯಂನ ಒಳಗಡೆ ಮತ್ತು ಹೊರಗಡೆ ಬಿಗಿ ಭದ್ರತೆಯನ್ನು ಹೇಗೆ ಕಾಪಾಡಬೇಕು ಎಂಬುದರ ಪ್ರಾತ್ಯಕ್ಷಿಕೆ ನಡೆಸಲಾಯಿತು. 

ಪ್ರವೇಶ ಮತ್ತು ನಿರ್ಗಮನ: ಸ್ಟೇಡಿಯಂನ ಗೇಟ್‌ಗಳಲ್ಲಿ ಭದ್ರತಾ ತಪಾಸಣೆ ಹೇಗಿರಬೇಕು? ತುರ್ತು ಸಂದರ್ಭದಲ್ಲಿ ಜನರನ್ನು ಹೇಗೆ ಹೊರಗೆ ಕರೆತರಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಯಿತು. ಅಭಿಮಾನಿಗಳ ನಿರ್ವಹಣೆ: ಸಾವಿರಾರು ಸಂಖ್ಯೆಯಲ್ಲಿ ಬರುವ ಕ್ರಿಕೆಟ್ ಪ್ರೇಮಿಗಳನ್ನು ನಿಯಂತ್ರಿಸುವುದು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಯಿತು. ಸಂಚಾರ ದಟ್ಟಣೆ: ಪಂದ್ಯದ ಸಮಯದಲ್ಲಿ ಸ್ಟೇಡಿಯಂ ಸುತ್ತಮುತ್ತ ಉಂಟಾಗುವ ಟ್ರಾಫಿಕ್ ಜಾಮ್ ತಪ್ಪಿಸಲು ಸಂಚಾರಿ ಪೊಲೀಸರು ವಿಶೇಷ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.

Source : News First

1 hour ago

Home Flash News