GBA ಚೊಚ್ಚಲ ಬಜೆಟ್ 2026-27: ಪೂರ್ವ ಮತ್ತು ಕೇಂದ್ರ ಪಾಲಿಕೆಗಳಿಗೆ ಬಂಪರ್ ಕೊಡುಗೆ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಹೊಸದಾಗಿ ರಚನೆಯಾದ ನಗರ ಪಾಲಿಕೆಗಳು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿವೆ. ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಆಯುಕ್ತ ಡಿ.ಎಸ್. ರಮೇಶ್ ಹಾಗೂ ಕೇಂದ್ರ ನಗರ ಪಾಲಿಕೆಗೆ ಆಯುಕ್ತ ರಾಜೇಂದ್ರ ಚೋಳನ್ ಅವರು ಆಯವ್ಯಯ ಮಂಡಿಸಿದರು. ಬೆಂಗಳೂರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಹೊಸದಾಗಿ ರಚನೆಯಾದ ನಗರ ಪಾಲಿಕೆಗಳು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿವೆ. ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಆಯುಕ್ತ ಡಿ.ಎಸ್. ರಮೇಶ್ ಹಾಗೂ ಕೇಂದ್ರ ನಗರ ಪಾಲಿಕೆಗೆ ಆಯುಕ್ತ ರಾಜೇಂದ್ರ ಚೋಳನ್ ಅವರು ಆಯವ್ಯಯ ಮಂಡಿಸಿದರು. ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಇದು ಬೆಂಗಳೂರಿಗೆ ಬೂಸ್ಟ್ ನೀಡುವ ಬಜೆಟ್. ಸದ್ಯ ಖಾಸಗಿ ಜಾಗದಲ್ಲಿ ಬಜೆಟ್ ಮಂಡಿಸುತ್ತಿದ್ದರೂ, ಮುಂದಿನ ಬಾರಿ ಸ್ವಂತ ಜಾಗದಲ್ಲಿ ನಡೆಸುತ್ತೇವೆ ಎಂದರು.