ರಾಜ್ಯದ ಸಾಲ ನಿಗದಿಪಡಿಸಿದ್ದು ಕೇಂದ್ರ: ಸಿಎಂ ಸಿದ್ದರಾಮಯ್ಯ ಹೇಳಿಕೆ
ದಾವಣಗೆರೆ: ರಾಜ್ಯಗಳು ಪಡೆಯುವ ಸಾಲದ ಮೊತ್ತವನ್ನು ನಿಗದಪಡಿಸುವುದು ಕೇಂದ್ರ ಸರ್ಕಾರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿಗದಿಪಡಿಸಿದಷ್ಟೇ ಸಾಲವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್‌ಆರ್‌ಬಿ) ಪ್ರಕಾರ ರಾಜ್ಯದ ಸಾಲ ಜಿಡಿಪಿಯ ಶೇ 25ರಷ್ಟು ಮೀರುವಂತಿಲ್ಲ. ಇದನ್ನು ಆಧರಿಸಿ ಸಾಲ ಪಡೆಯುವ ಅರ್ಹತೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ. ರಾಜ್ಯ ಸರ್ಕಾರದ ಸಾಲ ಎಫ್‌ಆರ್‌ಬಿ ಮಿತಿಯ ವ್ಯಾಪ್ತಿಯ ಒಳಗೆ ಇದೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ದಾವಣಗೆರೆ ಹಾಗೂ ಬಾಗಲಕೋಟೆಯ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ ಕಷ್ಟ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.