... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
6 ಸೆಕೆಂಡಲ್ಲಿ 17 ಲಕ್ಷ ಮತದಾನ:

6 ಸೆಕೆಂಡಲ್ಲಿ 17 ಲಕ್ಷ ಮತದಾನ: ಆಂಧ್ರ ಚುನಾವಣೆ ಬಗ್ಗೆ ನಿರ್ಮಲಾ ಸೀತಾರಾಮನ್ ಪತಿ

ನಮಗೆಲ್ಲ ತಿಳಿದಿರುವಂತೆ ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗಳ ಮತದಾನ ಬೆಳಿಗ್ಗೆ 8ರಿಂದ ಸಂಜೆ 6 ಅಥವಾ 7 ಗಂಟೆವರೆಗೆ ನಡೆಯುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತದಾನದ ಅವಧಿಯಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಆದರೆ, ಮಧ್ಯರಾತ್ರಿವರೆಗೂ ಎಲ್ಲಿಯೂ ಮತದಾನ ನಡೆಯುವುದಿಲ್ಲ. ಆದರೆ, 2024ರಲ್ಲಿ ಆಂಧ್ರ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಧ್ಯರಾತ್ರಿಯಲ್ಲೂ ಮತದಾನ ನಡೆದಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ಆರ್ಥಿಕ ತಜ್ಞ ಪರಕಾಳ ಪ್ರಭಾಕರ್ ಆರೋಪಿಸಿದ್ದಾರೆ.
ಇದು ವಿಚಿತ್ರ ಎನಿಸಿದರೂ ನಿಜ ಎನ್ನುತ್ತಿದ್ದಾರೆ ಪ್ರಭಾಕರ್. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಧ್ಯರಾತ್ರಿ ಬಳಿಕ ಸುಮಾರು 17 ಲಕ್ಷ ಮತ ಚಲಾವಣೆಯಾಗಿದೆ. ಈ ಮತಗಳು ಕೇವಲ 6 ಸೆಕೆಂಡುಗಳಲ್ಲಿ ಚಲಾವಣೆಯಾಗಿವೆ ಎಂದು ಆರೋಪಿಸಿದ್ದಾರೆ. ಮತದಾನದ ವೇಳೆ ಇವಿಎಂಗಳು ರೀಸೆಟ್ ಆಗಲು 14 ಸೆಕೆಂಡುಗಳು ಬೇಕಿರುವಾಗ, ಕೇವಲ 6 ಸೆಕೆಂಡುಗಳಲ್ಲಿ ಲಕ್ಷ ಲಕ್ಷ ಮತಗಳು ಹೇಗೆ ಚಲಾವಣೆಯಾದವು? ಆ ಸಮಯದಲ್ಲಿ ಒಬ್ಬ ಮತದಾರ ವಾಸ್ತವಿಕವಾಗಿ ಮತಗಟ್ಟೆ ಒಳಗೆ ಬಂದು ಮತ ಚಲಾಯಿಸಿ ನಿರ್ಗಮಿಸಲು ಸಾಧ್ಯವೇ? ಎಂದು ಪ್ರಭಾಕರನ್ ಪ್ರಶ್ನಿಸಿದ್ದಾರೆ. 

ಅಲ್ಲದೇ, ರಾತ್ರಿ 8 ಗಂಟೆಯ ನಂತರ ಏನೋ ಅಸಾಮಾನ್ಯವಾದ ಘಟನೆ ನಡೆದಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಂಧ್ರದ 3,500 ಮತಗಟ್ಟೆಗಳಲ್ಲಿ ತಡರಾತ್ರಿ 2 ಗಂಟೆವರೆಗೆ ಮತದಾನ ನಡೆದಿದೆ ಎಂದು ಪ್ರಭಾಕರನ್ ಆರೋಪಿಸಿದ್ದಾರೆ. ಈ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಮೈತ್ರಿಕೂಟವು 175 ಕ್ಷೇತ್ರಗಳ ಪೈಕಿ 164ರಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಮತದಾನದ ದತ್ತಾಂಶ ಉಲ್ಲೇಖಿಸಿ ಮಾತನಾಡಿದ ಅವರು, ರಾತ್ರಿ 8 ಗಂಟೆಯಿಂದ ತಡರಾತ್ರಿ 2ರವರೆಗೆ ಸುಮಾರು 52 ಲಕ್ಷ ಮತದಾನವಾಗಿದೆ. ದರಲ್ಲೂ ರಾತ್ರಿ 11.45ರಿಂದ ತಡರಾತ್ರಿ 2 ರವರೆಗೂ ಶೇ 4.16ರಷ್ಟು ಮತದಾನವಾಗಿದೆ. 

ಮಧ್ಯರಾತ್ರಿ ಬಳಿಕವೇ 17 ಲಕ್ಷ ಮತ ಚಲಾವಣೆಯಾಗಿದೆ. ಮಧ್ಯರಾತ್ರಿಯ ನಂತರ, ಪ್ರತಿ 20 ಸೆಕೆಂಡುಗಳಿಗೆ ಒಂದು ಮತ ಚಲಾಯಿಸಲಾಗಿದೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ ಎಂದು ಅವರು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದರು. ಟಿಡಿಪಿ 135 ಸ್ಥಾನಗಳನ್ನು ಪಡೆದರೆ, ಬಿಜೆಪಿ ಎಂಟು ಸ್ಥಾನಗಳು ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ 21 ಸ್ಥಾನಗಳನ್ನು ಗೆದ್ದಿತ್ತು.

Source : Prajavani

1 hour ago

Home Flash News