Select Location
All Locations
State
Region
City / District
ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು

ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಾಣೆಗಾರರ ಕ್ವಾರಂಟೈನ್ ಮಾಡಿದ ವೈದ್ಯರು

ಬೆಂಗಳೂರು (ಏ.17) ಕರ್ನಾಟಕದಲ್ಲಿ H5 N1 ಹಕ್ಕಿ ಜ್ವರ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂಗಳಲ್ಲಿ ತಪಾಸಣೆ ನಡೆಲಾಗಿದೆ. ಈ ವೇಳೆ ಕೋಳಿಗಳಲ್ಲಿ H5 N1 ವೈರಸ್ ಪತ್ತೆಯಾಗಿದೆ. ಮೊದಲ ತಪಾಸಣೆಯಲ್ಲಿ H5 N1 ವೈರಸ್ ಪತ್ತೆಯಾಗಿರುವ ಹಿನ್ನಲ್ಲೆ ಅಲರ್ಟ್ ನೀಡಲಾಗಿದೆ. ವೈರಸ್ ಪತ್ತೆಯಾದ ಪೌಲ್ಟ್ರಿ ಫಾರಂ ಕೋಳಿಗಳನ್ನು ಗುಂಡಿ ಹಾಕಿ ಮುಚ್ಚಲಾಗಿದೆ.

ಇದೇ ಪೌಲ್ಟ್ರಿ ಫಾರಂನಿಂದ ರಾಜ್ಯದ ಹಲವು ಕಡೆಗೆ ಕೋಳಿಗಳನ್ನು ಸರಬರಾಜು ಮಾಡಲಾಗುತ್ತದೆ. ಇದೇ ಘಟಕದಲ್ಲಿ H5 N1 ವೈರಸ್ ಪತ್ತೆಯಾಗಿರುವ ಕಾರಣ ಈ ಪೌಲ್ಟ್ರಿ ಫಾರಂ ಕೋಳಿಗಳನ್ನು ಗುಂಡಿ ತೆಗೆದು ಮುಚ್ಚಲಾಗಿದೆ. ಕೋಳಿ ಸಾಗಾಣೆಗಾರರು ಕ್ವಾರಂಟೈನ್ H5 N1 ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಹೆಸರಘಟ್ಟ ಪೌಲ್ಟ್ರಿ ಫಾರಂನಿಂದ ಇತರ ಭಾಗಗಳಿಗೆ ಕೋಳಿ ಸಾಗಾಣೆ ಮಾಡುವ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ H5 N1 ವೈರಸ್ ಮತ್ತಷ್ಟು ಹರಡದಂತೆ ಎಚ್ಚರವಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳಿಂದ ಸುತ್ತಮುತ್ತ ಪಂಚಾಯಿತಿಗಳಿಗೂ ನೋಟಿಸ್ ನೀಡಲಾಗಿದೆ.

ಕೋಳಿ ಸಾಕಾಣೆ ಶೆಡ್ ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಬಿಸಿಲ ತಾಪದಲ್ಲಿ H5 N1 ಹಕ್ಕಿ ಜ್ವರ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿದೆ. ಇದರಿಂದ ಕೋಳಿಗಳಲ್ಲಿH5 N1 ವೈರಸ್ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸುತ್ತ ಮುತ್ತಲಿನ ಕೋಳಿ ಶೆಡ್ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.


V6 News 1 hour ago
Home Flash News