KL Rahul 2.O: ಕನ್ನಡಿಗನ ರಾಹುಲ್ ರನ್ ಬೇಟೆ; ಡೆಲ್ಲಿ ಬ್ಯಾಟರ್ನ ಸಕ್ಸಸ್ ಸ್ಟೋರಿ..!
ಐಪಿಎಲ್ ಸೀಸನ್-19ರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ದರ್ಬಾರ್ ಜೋರಾಗಿದೆ. ತಾಂತ್ರಿಕವಾಗಿ ಅತ್ಯಂತ ಬಲಿಷ್ಠ ಬ್ಯಾಟರ್ ಎನಿಸಿಕೊಂಡಿರುವ ರಾಹುಲ್, ಈ ಬಾರಿ ವಿಭಿನ್ನ ಶೈಲಿಯ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಟಿ-20 ಕ್ರಿಕೆಟ್‌ಗೆ ರಾಹುಲ್ ಸೂಟ್ ಆಗುವುದಿಲ್ಲ ಎಂದು ಟೀಕಿಸುತ್ತಿದ್ದವರಿಗೆ ಅವರು ಈ ಸೀಸನ್‌ನಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ಬ್ಯಾಟಿಂಗ್‌ನಲ್ಲಿ ರಾಹುಲ್ 2.O ಆಟ! ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದ ನಂತರ ರಾಹುಲ್ ಈ ಐಪಿಎಲ್ ಟೂರ್ನಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿರುವ ಅವರು, ಡೆಲ್ಲಿ ಕ್ಯಾಪಿಟಲ್ಸ್ ಪರ ರನ್ ಮಳೆ ಸುರಿಸುತ್ತಿದ್ದಾರೆ. ರಾಹುಲ್ ಅವರ ಈ ಹೊಸ ಅವತಾರವನ್ನು ಅಭಿಮಾನಿಗಳು ರಾಹುಲ್ 2.0 ಎಂದು ಕರೆಯುತ್ತಿದ್ದಾರೆ.
ಹಲವು ವರ್ಷಗಳಿಂದ ರಾಹುಲ್ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅವರು ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಾರೆ ಎನ್ನುವ ಆರೋಪವಿತ್ತು. ಈ ಸೀಸನ್‌ನಲ್ಲಿ ರಾಹುಲ್ ಅವರ ಸ್ಟ್ರೈಕ್ ರೇಟ್ ನೋಡಿದರೆ ಟೀಕಾಕಾರರು ಸೈಲೆಂಟ್ ಆಗಿದ್ದಾರೆ. ತಮ್ಮ 12 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಈ ಬಾರಿ ರಾಹುಲ್ ಅತ್ಯಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕ್ತಿದ್ದಾರೆ.