Select Location
All Locations
State
Region
City / District
West Bengal: ರವೀಂದ್ರನಾಥ ಟ್ಯಾಗೋರ್ ಜನ್ಮದಿನದಂದೇ ಬಿಜೆಪಿ ಸರ್ಕಾರ ಪಟ್ಟಾಭಿಷೇಕ!

West Bengal: ರವೀಂದ್ರನಾಥ ಟ್ಯಾಗೋರ್ ಜನ್ಮದಿನದಂದೇ ಬಿಜೆಪಿ ಸರ್ಕಾರ ಪಟ್ಟಾಭಿಷೇಕ!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಮುಕ್ತಾಯ ಹಾಡಿರುವ ಭಾರತೀಯ ಜನತಾ ಪಕ್ಷ, ನೂತನ ಸರ್ಕಾರ ರಚನೆಗೆ ದಿನಾಂಕ ನಿಗದಿಪಡಿಸಿದೆ. ನೊಬೆಲ್ ಪ್ರಶಸ್ತಿ ವಿಜೇತ, ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರ 164ನೇ ಜನ್ಮದಿನವನ್ನು ಈ ವರ್ಷ ಮೇ 7ರಂದು ರಾಷ್ಟ್ರಮಟ್ಟದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಬಂಗಾಳಿ ಪಂಚಾಂಗದ ಪ್ರಕಾರ (Pachishe Boishakh)ಮುಖ್ಯ ಆಚರಣೆಯು ಮೇ 9, ಶನಿವಾರದಂದು ನಡೆಯಲಿದೆ. ಅಂದೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕ ಘೋಷಿಸಿದೆ. ಬಂಗಾಳಿಗಳ ಭಾವನೆ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆರೆಯಲು ಬಿಜೆಪಿ ಈ ವಿಶೇಷ ದಿನವನ್ನು ಆರಿಸಿಕೊಂಡಿದೆ. ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ 'ಸೋನಾರ್ ಬಾಂಗ್ಲಾ' (ಬಂಗಾರದ ಬಂಗಾಳ) ನಿರ್ಮಿಸುವ ಸಂಕಲ್ಪ ಮಾಡಿದ್ದರು.

"ಮನಸ್ಸು ಭಯಮುಕ್ತವಾಗಿರುವ ಮತ್ತು ತಲೆ ಎತ್ತಿ ನಿಲ್ಲುವ ಬಂಗಾಳವನ್ನು ಕಟ್ಟುವುದೇ ನಮ್ಮ ಗುರಿ" ಎಂದುಟ್ಯಾಗೋರ್ ಅವರ ಸಾಲುಗಳನ್ನು ಉಲ್ಲೇಖಿಸಿ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಇಂದು (ಮೇ 5) ದೆಹಲಿಯಿಂದ ಕೋಲ್ಕತ್ತಾಗೆ ಆಗಮಿಸಿ, ಚುನಾವಣಾ ಫಲಿತಾಂಶದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಹಸ್ತಾಂತರಿಸಲಿದ್ದಾರೆ. ರಾಜೀನಾಮೆ ಸಲ್ಲಿಕೆ: ಸಂವಿಧಾನಬದ್ಧವಾಗಿ ಪ್ರಸ್ತುತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರಿಗೆ ಶೀಘ್ರದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ. ಮುಖ್ಯ ಚುನಾವಣಾಧಿಕಾರಿಗಳು ಮೇ 6ರಂದು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಫಲಿತಾಂಶದ ವಿವರ ನೀಡಲಿದ್ದಾರೆ. ತದನಂತರ ರಾಜ್ಯಪಾಲರು ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಲಿದ್ದಾರೆ. ಕುತೂಹಲ ಮೂಡಿಸಿದ ಮುಂದಿನ ಮುಖ್ಯಮಂತ್ರಿ ಯಾರು? ಬಿಜೆಪಿಯು ಅಭೂತಪೂರ್ವ 206 ಸ್ಥಾನಗಳನ್ನು ಗೆದ್ದಿದ್ದರೂ, ಇದುವರೆಗೆ ಅಧಿಕೃತವಾಗಿ ಮುಖ್ಯಮಂತ್ರಿ ಹೆಸರನ್ನು ಪ್ರಕಟಿಸಿಲ್ಲ. ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಮೇ 9ರಂದು ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.


Udayavani 2 hours ago
Home Flash News