Select Location
All Locations
State
Region
City / District
ದಳಪತಿ ವಿಜಯ್ ಜಯಕ್ಕೆ ಶುಭ ಹಾರೈಸಿದ ಶಿವಣ್ಣ

ದಳಪತಿ ವಿಜಯ್ ಜಯಕ್ಕೆ ಶುಭ ಹಾರೈಸಿದ ಶಿವಣ್ಣ

ನಟ, ರಾಜಕಾರಣಿಯಾದ ದಳಪತಿ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಜಯ್‌ ಅವರ ಈ ಅಭೂತಪೂರ್ವ ಗೆಲುವಿಗೆ ಚಂದನವನದ ನಟ ಹ್ಯಾಟ್ರಕ್ ಹೀರೋ ಶಿವರಾಜ್ ಕುಮಾರ್ ‘ ಇದು ಅರ್ಹವಾದ ಗೆಲುವು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ. ಈ ನಡುವೆ ಶಿವಣ್ಣ ಕೂಡ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.

‘ಇತರರು ನಮ್ಮ ಮೇಲೆ ತೀವ್ರವಾದ ದಾಳಿ ಮಾಡುವಾಗ ಮೌನವಾಗಿರಬೇಕು. ನಮ್ಮ ಕೆಲಸ ಅವರಿಗೆ ಉತ್ತರ ನೀಡುವುದು ಅತ್ಯಂತ ದೊಡ್ಡ ಗೆಲುವು. ಪತ್ರಿಕಾ ಸಂವಾದವೊಂದರಲ್ಲಿ ನಾನು ಟಿವಿಕೆ ಮೂಲಕ ವಿಜಯ್ ರಾಜನಾಗಲು ಹೊರಟಿದ್ದಾರೆ ಎಂದು ತಮಾಷೆಗೆ ಹೇಳಿದ್ದೆ. ಆದರೆ ಇಂದು ನೀವು (ವಿಜಯ್) ರಾಜನಂತೆ ಎತ್ತರವಾಗಿ ನಿಂತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.


Prajavani 1 hour ago
Home Flash News