Select Location
All Locations
State
Region
City / District
Rocking Star Yash: ಅಂತಾರಾಷ್ಟ್ರೀಯ ಮ್ಯಾಗಜಿನ್ ಮುಖಪುಟದಲ್ಲಿ ಮಿಂಚಿದ ರಾಕಿ ಭಾಯ್!

Rocking Star Yash: ಅಂತಾರಾಷ್ಟ್ರೀಯ ಮ್ಯಾಗಜಿನ್ ಮುಖಪುಟದಲ್ಲಿ ಮಿಂಚಿದ ರಾಕಿ ಭಾಯ್!

ರಾಕಿಂಗ್ ಸ್ಟಾರ್ ಯಶ್ (Rocking Star Yash) ಕ್ರೇಜ್ ಅಂತಾರಾಷ್ಟ್ರೀಯ ಮಟ್ಟಕ್ಕೂ ಹೋಗಿ ತಲುಪಿದೆ. ಅದು ಟಾಕ್ಸಿಕ್ ಚಿತ್ರದ ಮೂಲಕವೇ ಅನ್ನೋದನ್ನ ಗೊತ್ತೇ ಇದೆ. ಹೊಸ ವಿಚಾರ ಏನಂದ್ರೆ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಇದೀಗ ಅಂತಾರಾಷ್ಟ್ರಿಯ ಹೆಸರಾಂತ ಮ್ಯಾಗ್ಜೀನ್‌ (Famous International Magazine) ಅಲ್ಲೂ ಬಂದಿದ್ದಾರೆ. ಈ ಒಂದು ಪ್ರತಿಷ್ಠಿತ ಮ್ಯಾಗ್ಜೀನ್‌ ಕವರ್ ಪೇಜ್‌ (Cover Page) ಅಲ್ಲಿ ಯಶ್ ಹೇಗೆ ಕಾಣಿಸುತ್ತಾರೆ ಅನ್ನೋದು ರಿವೀಲ್ ಆಗಿದೆ. ಈ ಸುದ್ದಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಖದರ್ ವೆರೈಟಿ ಮ್ಯಾಗ್ಜೀನ್ ತುಂಬಾನೆ ಹಳೆಯ ಮ್ಯಾಗ್ಜೀನ್ ಆಗಿದೆ. 1905 ರಿಂದಲೂ ಈ ಮ್ಯಾಗ್ಜೀನ್ ಇದೆ. ಇದು ವಿಶ್ವದ ಅತ್ಯಂತ ಹಳೆಯ ಹಾಗೂ ಪ್ರಭಾವಶಾಲಿ ಮ್ಯಾಗ್ಜೀಜಿನ್ ಆಗಿದೆ. ಈ ಒಂದು ವೆರೈಟಿ ಮ್ಯಾಗ್ಜೀನ್ ಅನ್ನ ಸಿನಿಮಾರಂಗದ 'ಬೈಬಲ್' ಅಂತಲೂ ಕರೆಯುತ್ತಾರೆ. ಆ ಹಂತಕ್ಕೇನೆ ಈ ಮ್ಯಾಗ್ಜೀನ್ ಇದೆ. ಈ ಮನರಂಜನಾ ಪತ್ರಿಕೆಯಲ್ಲಿ ಟಾಕ್ಸಿಕ್ ಚಿತ್ರದ ವಿಷಯ ಪ್ರಕಟಗೊಂಡಿದೆ.

ಈ ಮ್ಯಾಗ್ಜೀನ್‌ ಅಲ್ಲಿ ಬರೆದ ಲೇಖನಕ್ಕೆ "ದಿ ಯಶ್ ಎಫೆಕ್ಟ್" ಅಂತ ಶೀರ್ಷಿಕೆ ಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಪತ್ರಿಕೆಯ ಮುಖಪುಟದಲ್ಲಿ ರಾಕಿಂಗ್ ಸ್ಟಾರ್ ಯಶ್ ಅದ್ಭುತ ಫೋಟೋವನ್ನು ಬಳಕೆ ಮಾಡಿದ್ದಾರೆ. ಇದರಲ್ಲಿ ಯಶ್ ಬಿಳಿ ಬಣ್ಣದ ಸೂಟ್ ಹಾಕಿದ್ದಾರೆ. ಚೆಂದದ ಹ್ಯಾಟ್ ಕೂಡ ಇದೆ. ಲುಕ್ ಆ್ಯಂಡ್ ಫೀಲ್ ಸಖತ್ ಆಗಿಯೇ ಇದೆ. ಅಷ್ಟೆ ಸ್ಟೈಲಿಶ್ ಆಗಿಯೇ ಯಶ್ ಇಲ್ಲಿ ಕಾಣಿಸುತ್ತಿದ್ದಾರೆ ಅಂತ ಹೇಳಬಹುದು.

ರಾಕಿಂಗ್ ಸ್ಟಾರ್ ಯಶ್ ಒಂದು ದೊಡ್ಡ ಕನಸು ಕಂಡಿದ್ದಾರೆ. ಕನ್ನಡ ಚಿತ್ರರಂಗವನ್ನ ವಿಶ್ವಮಟ್ಟದಲ್ಲಿಯೇ ಬೆಳಗಬೇಕು ಅಂತ ಆಸೆ ಪಟ್ಟಿದ್ದಾರೆ. ಕೇವಲ ಆಸೆ ಮತ್ತು ಕನಸು ಕಂಡಿಲ್ಲ. ಇದಕ್ಕೆ ಬೇಕಿರೋ ಸೂಕ್ತ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಟಾಕ್ಸಿಕ್ ಚಿತ್ರದ ಸದ್ದು ಹಾಲಿವುಡ್‌ ಅಲ್ಲೂ ಕೇಳಿ ಬರ್ತಿದೆ. ಲಾಸ್ ವೇಗಾಸ್ ಅಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲೂ ಟಾಕ್ಸಿಕ್ ಕಂಡವರು ಬೆರಗಾಗಿದ್ದಾರೆ.


News18 Kannada 51 minutes ago
Home Flash News