Select Location
All Locations
State
Region
City / District
ಬಂಗಾಳದಲ್ಲಿ ಬಿಜೆಪಿಗೆ ಗೆಲುವು ಮತ್ತು ‘SIR’ ವಿವಾದ; ಸೋಲು-ಗೆಲುವಿನ ಹಿಂದಿನ ನೈಜ ಸತ್ಯಾಂಶಗಳೇನು?

ಬಂಗಾಳದಲ್ಲಿ ಬಿಜೆಪಿಗೆ ಗೆಲುವು ಮತ್ತು ‘SIR’ ವಿವಾದ; ಸೋಲು-ಗೆಲುವಿನ ಹಿಂದಿನ ನೈಜ ಸತ್ಯಾಂಶಗಳೇನು?

ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ತೃಣಮೂಲ ಕಾಂಗ್ರೆಸ್ (TMC) ಈ ಬಾರಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ 207 ಸ್ಥಾನಗಳೊಂದಿಗೆ ಅಭೂತಪೂರ್ವ ಬಹುಮತ ಸಾಧಿಸಿದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಆದರೆ, ಈ ಫಲಿತಾಂಶದ ಬೆನ್ನಲ್ಲೇ ‘ಮತದಾರರ ಪಟ್ಟಿ ಪರಿಷ್ಕರಣೆ’ ಕುರಿತಾದ ವಿವಾದವೊಂದು ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ.

ರಾಹುಲ್ ಗಾಂಧಿ ನೇತೃತ್ವದ 'INDIA' ಮೈತ್ರಿಕೂಟವು ಈ ಚುನಾವಣೆಯ ನಿಷ್ಪಕ್ಷಪಾತತೆ ಬಗ್ಗೆ ಪ್ರಶ್ನಿಸುತ್ತಿದೆ. ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ಆಡಳಿತಾರೂಢ ಟಿಎಂಸಿ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಮೈತ್ರಿಕೂಟ ಆರೋಪಿಸಿದೆ. ಉದ್ದೇಶಪೂರ್ವಕವಾಗಿ ತಮ್ಮ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದು ಇವರ ವಾದ.

ರಾಷ್ಟ್ರಮಟ್ಟದ ಪ್ರಕ್ರಿಯೆ: 'SIR' ಎಂಬುದು ಕೇವಲ ಬಂಗಾಳಕ್ಕೆ ಸೀಮಿತವಾದ ಅಸ್ತ್ರವಲ್ಲ. ಇದು ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿಡಲು ಚುನಾವಣಾ ಆಯೋಗವು ದೇಶಾದ್ಯಂತ ನಡೆಸುವ ನಿಯಮಿತ ಪ್ರಕ್ರಿಯೆ. ಈ ಹಿಂದೆ ಉತ್ತರ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನಗಳಲ್ಲೂ ಇಂತಹ ಪರಿಷ್ಕರಣೆಗಳು ನಡೆದಿವೆ. ಹಾಗಾಗಿ ಪಶ್ಚಿಮ ಬಂಗಾಳವನ್ನು ವಿಶೇಷವಾಗಿ ನೋಡೋದು ಬೇಡ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.


News First 50 minutes ago
Home Flash News