Select Location
All Locations
State
Region
City / District
ಚನ್ನಪಟ್ಟಣ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇಂದಿನಿಂದ BMTC ಎಸಿ ಸಂಚಾರ

ಚನ್ನಪಟ್ಟಣ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್.. ಇಂದಿನಿಂದ BMTC ಎಸಿ ಸಂಚಾರ

ರಾಮನಗರ: ಚನ್ನಪಟ್ಟಣ ಮತ್ತು ಬೆಂಗಳೂರು ನಡುವೆ ನಿತ್ಯ ಪ್ರಯಾಣಿಸುವ ಜನತೆಗೆ ಬಿಎಂಟಿಸಿ (BMTC) ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಹವಾನಿಯಂತ್ರಿತ (AC) ಬಸ್ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇನ್ಮುಂದೆ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

ಸಿಪಿವೈ-ಡಿಕೆಸು ಚಾಲನೆ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಜಂಟಿಯಾಗಿ ಎಸಿ ಬಸ್‌ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ:ಗಗನಸಖಿಯ ಸೊಂಟಕ್ಕೆ ಕೈಹಾಕಿ ಫ್ರೆಂಡ್​ಶಿಪ್ ಎಂದ ಕಿರಾತಕ.. ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿ ಆಗಿದ್ದೇನು? ದಿನಕ್ಕೆ 44 ಟ್ರಿಪ್‌ಗಳ ಸಂಚಾರ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ ನಿತ್ಯ 8 ಎಸಿ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ಪ್ರತಿದಿನ ಒಟ್ಟು 44 ಟ್ರಿಪ್‌ಗಳನ್ನು ಮಾಡಲಿವೆ. ಇದರಿಂದಾಗಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವವರಿಗೆ ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.


News First 47 minutes ago
Home Flash News