Select Location
All Locations
State
Region
City / District
CM Vijay: ಸಿಎಂ ಆದ ಆರೇ ದಿನಕ್ಕೆ ದಳಪತಿ ವಿಜಯ್‌ಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್! ಅದೊಂದು ತಪ್ಪು ಮಾಡದಂತೆ ಎಂದು ವಾರ್ನಿಂಗ್!

CM Vijay: ಸಿಎಂ ಆದ ಆರೇ ದಿನಕ್ಕೆ ದಳಪತಿ ವಿಜಯ್‌ಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್! ಅದೊಂದು ತಪ್ಪು ಮಾಡದಂತೆ ಎಂದು ವಾರ್ನಿಂಗ್!

ನವದೆಹಲಿ: ತಮಿಳುನಾಡಿನಲ್ಲಿ ಟಿವಿಕೆ (TVK) ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚಿಸಿದ ನಂತರ ದಳಪತಿ ವಿಜಯ್ (CM Vijay) ಅವರಿಗೆ ಸಿಎಂ ಆದ ಆರೇ ದಿನಕ್ಕೆ ಈಗ ಮೊದಲ ಮತ್ತು ಪ್ರಮುಖ ರಾಜಕೀಯ ಎಚ್ಚರಿಕೆ ಸಿಕ್ಕಿದೆ. ಅಚ್ಚರಿಯ ಸಂಗತಿ ಎಂದರೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಈ ಎಚ್ಚರಿಕೆಯನ್ನು ನೀಡಿರೋದು ಬೇರೆ ಯಾರೂ ಅಲ್ಲ, ಬಹುಮತದ ಅಂಚಿನಲ್ಲಿ ಬಂದು ನಿಂತಾಗ ಸರ್ಕಾರ ರಚಿಸುವಂತೆ ಹೆಗಲು ಕೊಟ್ಟು ನಿಂತಿದ್ದ ಮೈತ್ರಿ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಇಂತಹುದೊಂದು ಎಚ್ಚರಿಕೆ ನೀಡುತ್ತಿದ್ದಂತೆ ತಮಿಳುನಾಡಿನಲ್ಲಿ ರಾಜಕೀಯ ಚರ್ಚೆಗಳು ಆರಂಭವಾಗಿದೆ.

ಅಂದಹಾಗೆ, ಸಿಎಂ ವಿಜಯ್ ಅವರು ಎಐಎಡಿಎಂಕೆ ಬಂಡಾಯ ಶಾಸಕರನ್ನು ಸರ್ಕಾರದಲ್ಲಿ ಸೇರಿಸಿಕೊಂಡರೆ, ಅವರ ವಿಶ್ವಾಸಾರ್ಹತೆ ಮತ್ತು ಉತ್ತಮ ಇಮೇಜ್‌ಗೆ ಹಾನಿಯಾಗಬಹುದು ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಹೇಳಿದೆ. ಎಐಎಡಿಎಂಕೆ ಮತ್ತು ಡಿಎಂಕೆ ಎರಡನ್ನೂ ಅಧಿಕಾರದಿಂದ ದೂರವಿಡುವ ಬಯಕೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಜನಾದೇಶವನ್ನು ತಮಿಳುನಾಡಿನ ಜನರು ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಹೇಳಿದ್ದಾರೆ.

ವಿಜಯ್ ಈ ಜನಾದೇಶವನ್ನು ಗೌರವಿಸಬೇಕು ಮತ್ತು ಎಐಎಡಿಎಂಕೆ ಬಣವನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವುದನ್ನು ತಡೆಯಬೇಕು. ಮುಖ್ಯಮಂತ್ರಿ ವಿಜಯ್ ಅವರಿಗೆ ಯಾವುದೇ ಬಣದ ಬೆಂಬಲ ಅಗತ್ಯವಿಲ್ಲ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವುದಾಗಿ ನ್ಯೂಸ್ 18 ಹಿಂದಿ ಪ್ರಕಟಿಸಿದೆ. ವಿಶ್ವಾಸ ಮತಯಾಚನೆಯ ಸಮಯದಲ್ಲಿ ಬಂಡಾಯ ಶಾಸಕರು ಸರ್ಕಾರವನ್ನು ಬೆಂಬಲಿಸಿದರೆ, ಅವರನ್ನು ಮಂತ್ರಿಗಳನ್ನಾಗಿ ಮಾಡುವುದು ಅಥವಾ ಸರ್ಕಾರದ ಭಾಗವಾಗಿಸುವುದರಿಂದ ಸರಿಯಾದ ನಿರ್ಧಾರವಾಗುವುದಿಲ್ಲ ಎಂಬುದು ಬೇರೆ ವಿಷಯ. ಅಂತಹ ಕ್ರಮದಿಂದ ದೂರವಿರುವಂತೆ ಕಾಂಗ್ರೆಸ್ ನಾಯಕ ಸಿಎಂ ವಿಜಯ್ ಅವರನ್ನು ಒತ್ತಾಯಿಸಿದ್ದಾರೆ.


News18 Kannada 49 minutes ago
Home Flash News