Select Location
All Locations
State
Region
City / District
ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದ್ಯಾ 8ನೇ ವೇತನ ಆಯೋಗದ ಲಾಭ?

ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದ್ಯಾ 8ನೇ ವೇತನ ಆಯೋಗದ ಲಾಭ?

8ನೇ ವೇತನಾಯೋಗದ ಕುರಿತು ಬಹಳ ದಿನಗಳಿಂದ ತೀವ್ರವಾದ ಚರ್ಚೆಗಳು ನಡೆಯುತ್ತಿವೆ. ವೇತನ ಹೆಚ್ಚಳ, ಉತ್ತಮ ಪಿಂಚಣಿ ರಕ್ಷಣೆ ಮತ್ತು ವೇತನ ಲೆಕ್ಕಾಚಾರದ ವಿಧಾನಗಳಲ್ಲಿನ ಬದಲಾವಣೆಗಳಿಗಾಗಿ ನೌಕರರ ಸಂಘಟನೆಗಳು ನಿರಂತರವಾಗಿ ಬೇಡಿಕೆಗಳನ್ನು ಎತ್ತುತ್ತಿವೆ. ಕೇಂದ್ರ ನೌಕರರ ಜೊತೆಗೆ, ದೇಶಾದ್ಯಂತ ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ಸಹ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸರಳ ಮತ್ತು ಸಂಕ್ಷಿಪ್ತವಾಗಿ ಹೇಳ್ಬೇಕು ಅಂದ್ರೆ ರಾಜ್ಯ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ನೇರ ಲಾಭ ಸಿಗೋದಿಲ್ಲ. ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ 8ನೇ ಕೇಂದ್ರ ವೇತನ ಆಯೋಗವು ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳನ್ನು ಮಾತ್ರ ಪರಿಶೀಲಿಸುತ್ತದೆ. ರಾಜ್ಯ ನೌಕರರು ಈ ಚರ್ಚೆಯಲ್ಲಿ ನೇರವಾಗಿ ಭಾಗಿಯಾಗುವುದಿಲ್ಲ.

ರಾಜ್ಯ ಸರ್ಕಾರಗಳು ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಅನುಸರಿಸಲು ಕಾನೂನುಬದ್ಧವಾಗಿ ಬದ್ಧವಾಗಿಲ್ಲದಿದ್ದರೂ, ಹೆಚ್ಚಿನ ರಾಜ್ಯಗಳು ನಂತರ ಅದನ್ನು ತಮ್ಮ ಮಾನದಂಡವಾಗಿ ಅಳವಡಿಸಿಕೊಳ್ಳುತ್ತವೆ. ಅನೇಕ ರಾಜ್ಯಗಳು ಕೇಂದ್ರ ಸರ್ಕಾರದಂತೆಯೇ ಅದೇ ವೇತನ ಮ್ಯಾಟ್ರಿಕ್ಸ್, ಫಿಟ್ಮೆಂಟ್ ಅಂಶ ಮತ್ತು ಭತ್ಯೆಗಳನ್ನು ಕಾರ್ಯಗತಗೊಳಿಸುತ್ತವೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ರಾಜ್ಯ ವೇತನ ಆಯೋಗಗಳು ಅಥವಾ ತಜ್ಞರ ಸಮಿತಿಗಳನ್ನು ರಚಿಸುತ್ತವೆ. ಆದ್ದರಿಂದ, ಯಾವುದೇ ನೇರ ಪರಿಣಾಮವಿಲ್ಲದಿದ್ದರೂ, ಇದು ರಾಜ್ಯ ನೌಕರರಿಗೆ ಅತ್ಯಂತ ಮುಖ್ಯವಾಗಿದೆ.


Asianet News 1 hour ago
Home Flash News