Famous Actor Passes Away: ಜನಪ್ರಿಯ ನಟ, ನಿರ್ದೇಶಕ ಇನ್ನಿಲ್ಲ! ಹೃದಯಾಘಾತಕ್ಕೆ ಮತ್ತೋರ್ವ ಕಲಾವಿದನನ್ನು ಕಳೆದುಕೊಂಡ ಚಿತ್ರರಂಗ!
ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದ ಕಲಾವಿದರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಕನ್ನಡದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಲ್ಲಿ ನಿಧನ ಹೊಂದಿದ ಬಳಿಕ ಕಲಾವಿದರು ಇದೇ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಹೆಚ್ಚು ಸುದ್ದಿಯಾಗುತ್ತಿದೆ. ಇದೀಗ ಮತ್ತೋರ್ವ ಜನಪ್ರಿಯ ನಟ, ನಿರ್ಮಾಪಕ ಹಾರ್ಟ್ ಅಟ್ಯಾಕ್‌ನಿಂದ ಕೊನೆಯುಸಿರೆಳೆದಿದ್ದಾರೆ. ಮನರಂಜನಾ ಜಗತ್ತಿಗೆ ಮತ್ತೊಂದು ದುಃಖದ ಸುದ್ದಿ ನೀಡಿರೋದು ಬೇರೆ ಯಾರೂ ಅಲ್ಲ, ಹಿರಿಯ ತಮಿಳು ನಟ-ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು. ಇಂದು ಬೆಳಗ್ಗೆ ಭಾಗ್ಯರಾಜ್ ಅವರು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರ ನಿಧನವು ತಮಿಳು ಚಿತ್ರರಂಗದ ಒಂದು ಯುಗದ ಅಂತ್ಯವನ್ನು ಸೂಚಿಸಿದೆ.
ತಮ್ಮ ವಿಶಿಷ್ಟ ಕಥಾ ನಿರೂಪಣಾ ಶೈಲಿ, ಚಿತ್ರಕಥೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ನಿರ್ಮಿಸಲಾದ ಅನೇಕ ಮನರಂಜನಾ ಚಲನಚಿತ್ರಗಳಿಂದ ಅವರು ತುಂಬಾನೆ ಖ್ಯಾತಿ ಗಳಿಸಿದ್ದರು. ಭಾಗ್ಯರಾಜ್ ಅವರು ತಮ್ಮ ಪತ್ನಿ ನಟಿ ಪೂರ್ಣಿಮಾ ಭಾಗ್ಯರಾಜ್ ಮತ್ತು ಮಕ್ಕಳಾದ ನಟ ಶಾಂತನು ಭಾಗ್ಯರಾಜ್ ಮತ್ತು ಮಗಳು ಸರ್ನಿಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.