Select Location
All Locations
State
Region
City / District
INDvsSL: ಗಾಲೆ ಟೆಸ್ಟ್‌ ಪಂದ್ಯ ಗೆಲುವಿನ ಸನಿಹದಲ್ಲಿ ಭಾರತ: ಲಂಕಾಗೆ ಇನ್ನೂ ಬೇಕು 288 ರನ್


INDvsSL: ಗಾಲೆ ಟೆಸ್ಟ್‌ ಪಂದ್ಯ ಗೆಲುವಿನ ಸನಿಹದಲ್ಲಿ ಭಾರತ: ಲಂಕಾಗೆ ಇನ್ನೂ ಬೇಕು 288 ರನ್

ಗಾಲೆ: ಲಂಕಾ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಸಂಪೂರ್ಣ ಹಿಡಿತ ಸಾಧಿಸಿದೆ. 372 ರನ್‌ ಗಳ ಗುರಿ ಪಡೆದಿರುವ ಶ್ರೀಲಂಕಾ ತಂಡವು ಇದೀಗ 84 ರನ್‌ ಗೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದು, ಕೊನೆಯ ದಿನದ ಆಟ ಬಾಕಿಯಿದೆ. 47 ರನ್‌ ಗೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಲಂಕಾ ತಂಡಕ್ಕೆ ನಾಯಕ ಧನಂಜಯ ಡಿಸಿಲ್ವಾ ಮತ್ತು ಮೊದಲ ಪಂದ್ಯದ ಶತಕವೀರ ಸೋನಲ್‌ ದಿನುಶಾ ಆಸರೆಯಾಗಿದ್ದಾರೆ. ಮುರಿಯದ ಐದನೇ ವಿಕೆಟ್‌ ಗೆ 37 ರನ್‌ ಜೊತೆಯಾಟವಾಡಿದ್ದಾರೆ. ಅದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು ಎರಡನೇ ಇನ್ನಿಂಗ್ಸ್‌ ನಲ್ಲಿ 193 ರನ್‌ ಕಲೆ ಹಾಕಿತು. ಮೊದಲ ಇನ್ನಿಂಗ್ಸ್‌ ಮುನ್ನಡೆ ಸೇರಿ ಲಂಕಾ ತಂಡಕ್ಕೆ 372 ರನ್‌ ಗುರಿ ನೀಡಲಾಯಿತು.

ಭಾರತ ತಂಡದ ಪರ ಪಂತ್‌ 66 ರನ್‌ ಗಳಿಸಿ ಇನ್ನಿಂಗ್ಸ್‌ ನ ಏಕೈಕ ಅರ್ಧ ಶತಕವೀರರಾದರು. ಉಳಿದಂತೆ ದೇವದತ್ತ ಪಡಿಕ್ಕಲ್‌ 44 ರನ್‌ ಮತ್ತು ರಾಹುಲ್‌ 35 ರನ್‌ ಮಾಡಿದರು. ಲಂಕಾ ಪರ ಅಶಿತಾ ಫರ್ನಾಂಡೋ ನಾಲ್ಕು ವಿಕೆಟ್‌ ಪಡೆದರು. ಬೃಹತ್‌ ಗುರಿ ಬೆನ್ನತ್ತಿ ಬ್ಯಾಟಿಂಗ್‌ ಆರಂಭಿಸಿದ ಲಂಕಾ 13 ರನ್‌ ಮಾಡಿದ್ದಾಗಲೇ ಮದುಷ್ಕಾ ರೂಪದಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ಸಿರಾಜ್‌ ಮತ್ತೆ ಮದುಷ್ಕಾ ಬೇಟೆಯಾಡಿದರು. ಚಾಂಡಿಮಾಲ್‌ ಬದಲಿಗೆ ಕಂಕಶನ್‌ ಸಬ್‌ ಆಗಿ ಬಂದ ಪಸಿಂದು ಸುರಿಯಬಂಡಾರ ಶೂನ್ಯಕ್ಕೆ ಔಟಾದರು. ಲಹಿರು ಉದಾರ 16 ರನ್‌, ಕಮಿಂದು ಮೆಂಡಿಸ್‌ 2 ರನ್‌ ಗೆ ವಿಕೆಟ್‌ ಒಪ್ಪಿಸಿದರು. ನಾಯಕ ಧನಂಜಯ ಡಿಸಿಲ್ವ 31 ರನ್‌ ಮತ್ತು ಸೋನಲ್‌ ದಿನುಶಾ 25 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತದ ಪರ ಮಾನವ್‌ ಸುತಾರ್‌ ಎರಡು ವಿಕೆಟ್‌ ಕಿತ್ತರೆ, ಸಿರಾಜ್‌ ಮತ್ತು ಪ್ರಸಿಧ್‌ ತಲಾ ಒಂದು ವಿಕೆಟ್‌ ಪಡೆದರು.


Udayavani 1 hour ago
Home Flash News