ಟಾಕ್ಸಿಕ್ ಲೋಕದ ರೆಬೆಕಾ! ತಾರಾ ಸುತಾರಿಯಾ ಫಸ್ಟ್ ಲುಕ್ ಔಟ್
ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್‌ಗೆ ಇನ್ನೂ ಮೂರು ತಿಂಗಳಿದೆ. ಆಗಲೇ ಚಿತ್ರದ ಒಂದೊಂದೇ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಅಗುತ್ತಿವೆ. ಮೊನ್ನೆ ನಯನತಾರಾ (Nayanthara) ಪಾತ್ರದ ಪೋಸ್ಟರ್ ಹೊರ ಬಂದಿದೆ. ಅದಕ್ಕೂ ಮೊದಲು ಹುಮಾ ಖುರೇಷಿ (Huma Quresh) ರೋಲ್ ಏನು ಅನ್ನೋದು ಗೊತ್ತಾಗಿದೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಪಾತ್ರದ ಪರಿಚಯ ಕೂಡ ಆಗಿದೆ. ಆದರೆ, ಬಾಲಿವುಡ್ ನಟಿ ತಾರಾ ಸುತಾರಿಯಾ (Tara Sutaria) ರೋಲ್ ಏನು ಅನ್ನೋದು ಗೊತ್ತಾಗಿರಲಿಲ್ಲ. ಆದರೆ, ಅದನ್ನೂ ಇದೀಗ ಯಶ್ ರಿವೀಲ್ ಮಾಡಿದ್ದಾರೆ. ಪಾತ್ರದ ಲುಕ್ ಆ್ಯಂಡ್ ಫೀಲ್ ಹಾಗೂ ಹೆಸರು ಏನು ಅನ್ನೋದು ಈಗ ಗೊತ್ತಾಗಿದೆ.