ಟ್ರಂಪ್ಗೆ ದಿಢೀರ್ ಸಿಕ್ಕಿತು ನೊಬೆಲ್ ಶಾಂತಿ ಪ್ರಶಸ್ತಿ! ಕಸಿದುಕೊಂಡರೂ ಇತಿಹಾಸ ಸೃಷ್ಟಿಸಿದ ಅಮೆರಿಕ ಅಧ್ಯಕ್ಷ
2025ರ ನೊಬೆಲ್ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂದು ಗೋಳೋ ಎಂದು ಕಣ್ಣೀರಿಟ್ಟವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದಕ್ಕಾಗಿ ಅವರು ಕೊಟ್ಟ ಹೇಳಿಕೆಗಳು, ಬಿಟ್ಟ ರೈಲುಗಳು ಅಷ್ಟಿಷ್ಟಲ್ಲ. ಆದರೂ ಕೊನೆಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ವೆನೆಜುವೆಲಾದ ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾಡೊ (Maria Corina Machado) ಅವರಿಗೆ. ಆದರೆ ಟೈಮಲ್ಲದ ಟೈಮ್ನಲ್ಲಿ ಇದೀಗ ದಿಢೀರ್ ಎಂದು ಟ್ರಂಪ್ಗೆ ಪ್ರಶಸ್ತಿ ಸಿಕ್ಕೇ ಬಿಟ್ಟಿದೆ. ಅದೂ ಅವರ ಮನೆಬಾಗಿಲಿಗೇ ಹುಡುಕಿಕೊಂಡು ಹೋಗಿದೆ. ವಿಚಿತ್ರ ಎನ್ನಿಸಿದರೂ ಇದು ಸತ್ಯ. ಹಾಗಿದ್ದರೆ ಆಗಿದ್ದೇನು? ಹಿಂದೆಂದೂ ಆಗದ ಘಟನೆ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ.