ಈ ವರ್ಷದ ಅತೀ ದೊಡ್ಡ ಭವಿಷ್ಯ ಬಯಲು; ಚಂದ್ರಮಂಡಲ ಜ್ಯೋತಿ ನೀಡಿತು ಒಳಿತಿನ ಮುನ್ಸೂಚನೆ!
ಮೈಸೂರು: ಚಿಕ್ಕಲೂರು ಗ್ರಾಮದ (Village) ಐತಿಹಾಸಿಕ ಚಂದ್ರಮಂಡಲ ಕಟ್ಟೆಯಲ್ಲಿ ನಡೆದ ಧಾರ್ಮಿಕ ಆಚರಣೆ ವೇಳೆ ಹೊತ್ತಿ ಉರಿದ ಚಂದ್ರಮಂಡಲ ಜ್ಯೋತಿ (Flame) ಉತ್ತರ ದಿಕ್ಕಿಗೆ ಬಾಗಿದ ಘಟನೆ ಭಕ್ತರಲ್ಲಿ ಸಂತಸ ಮೂಡಿಸಿದೆ. ಜ್ಯೋತಿ ಯಾವ ದಿಕ್ಕಿಗೆ ಬಾಗುತ್ತದೆಯೋ ಆ ದಿಕ್ಕಿನಲ್ಲಿ (Direction) ಉತ್ತಮ ಮಳೆ, ಬೆಳೆಯಾಗಿ ಸುಭಿಕ್ಷೆ ಹಾಗೂ ಸಮೃದ್ಧಿ ದೊರೆಯುತ್ತದೆ ಎಂಬುದು ಇಲ್ಲಿನ ಜನರ ಪುರಾತನ (Ancient) ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ದಿಕ್ಕಿಗೆ ಜ್ಯೋತಿ ಬಾಗಿರುವುದು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ಸೂಚನೆ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.